ರಾಜ್ಯ ಮಟ್ಟದ ಟಗರಿನ ಸ್ಪರ್ಧೆ

ಮುನವಳ್ಳಿ,ಜ22: ಪಟ್ಟಣದ ಕುಸ್ತಿ ಮೈದಾನದಲ್ಲಿ ಆರ್.ಗ್ರುಪ್ ಹಾಗೂ ರಫೀಕ ಬೇಪಾರಿ ಇವರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗ ಸ್ಪರ್ಧೆ ಜರುಗಿತು.
ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ದಾರವಾಡದ ಅಂಜುಮನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿದರು.
ಪ್ರಾಸ್ತಾವಿಕವಾಗಿ ಎಪಿ.ಎಮ್.ಸಿ ಅದ್ಯಕ್ಷ ಚಂದ್ರು ಜಂಬ್ರಿ, ಬ್ಲಾಕ ಕಾಂಗ್ರೆಸ ಅಧ್ಯಕ್ಷ ಡಿ.ಡಿ.ಟೋಪೋಜಿ, ಮಾತನಾಡಿದರು.
ಫಕ್ಕಿರಪ್ಪ ಹದ್ದನ್ನವರ, ಅಂದಾನಿ ಗೋಮಾಡಿ, ಚಂದ್ರು ಮುಚ್ಚಂಡಿ, ಪುರಸಭೆಯ ಸದಸ್ಯರಾದ ಸಿ.ಬಿ.ಬಾಳಿ, ಈಶ್ವರ ಕರಿಕಟ್ಟಿ ಹಾಗೂ ಟಿ.ಎನ್.ಮುರಂಕರ, ನಾಗರಾಜ ನೇಗಿನಹಾಳ, ಕಲ್ಲಪ್ಪ ನಲವಡೆ, ಶಂಕರ ಕಲಾಲ, ವಿವಿದ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸ್ವಾಗತ ಬಾಳೂ ಹೊಸಮನಿ, ಕಾರ್ಯಕ್ರಮದ ನಿರೂಪಣೆ ಭವಾನಿ ಕೊಂದುನಾಯಕ ನೆರವೇರಿಸಿದರು.