ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರದ ಉದ್ಘಾಟನೆಜನಸಾಮಾನ್ಯರ ಹೃದಯ ತಟ್ಟುವಲ್ಲಿ ಜಾನಪದ ಹಾಸುಹೊಕ್ಕಾಗಿದೆಕೆ. ಲೀಲಾವತಿ

ಗದಗ(ಕರ್ನಾಟಕ ವಾರ್ತೆ) ನವೆಂಬರ್ 10: ಜನ ಸಾಮಾನ್ಯರ ಹೃದಯ ತಟ್ಟುವಲ್ಲಿ ಜಾನಪದ ಹಾಸುಹೊಕ್ಕಾಗಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರೀವೇನ್‍ಶನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಶ್ರೀಮತಿ ಕೆ. ಲೀಲಾವತಿ ತಿಳಿಸಿದರು. .
ಹುಲಕೋಟಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್.ಐ.ವಿ. ಸೋಂಕು ತಡೆಗಟ್ಟುವಲ್ಲಿ ಜಾನಪದ ಕಲಾತಂಡಗಳ ಪಾತ್ರ ಮಹತ್ವದ್ದಾಗಿದ್ದು, ಸಾಮಾನ್ಯ ಜನರ ಹೃದಯ ತಟ್ಟುವಲ್ಲಿ ಜನಪದ ಹಾಸುಹೊಕ್ಕಾಗಿದೆ. ಹೆಚ್.ಐ.ವಿ. ಏಡ್ಸ್‍ಗೆ ಮದ್ದಿಲ್ಲ, ಮುಂಜಾಗೃತೆಯೇ ಅದಕ್ಕೆ ಮದ್ದಾಗಿದ್ದು, ಸುರಕ್ಷಿತ ಜೀವನವನ್ನು ಅಳವಡಿಸಿಕೊಳ್ಳುವ ಮುಖಾಂತರ ಹೆಚ್.ಐ.ವಿ ಸೊಂಕಿನಿಂದ ದೂರವಿರಲು ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಜಾನಪದ ಕಲಾತಂಡದವರಿಗೆ ಕೆ. ಲೀಲಾವತಿಯವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್. ಜೆ. ಸಲಗರೆ ಮಾತನಾಡಿ ಹೆಚ್.ಐ.ವಿ. ಸೋಂಕಿನ ನಿಯಂತ್ರಣದಲ್ಲಿ ಜಾನಪದ ಮಾದ್ಯಮ ಪರಿಣಾಮಕಾರಿಯಾದಂತ ಸಾಧನವಾಗಿದ್ದು, ಜನರ ನಡೆನುಡಿಗಳಲ್ಲಿ ಬದಲಾವಣೆ ಮಾಡುವಂತ ಶಕ್ತಿ ಈ ಜಾನಪದ ಕಲೆಗೆ ಇದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್.ಐ.ವಿ. ಸೊಂಕಿತರಿಗೆ, ಅಬಲೆಯರಿಗೆ, ಮಕ್ಕಳಿಗೆ ಉಚಿತ ಕಾನೂನು ಸೇವೆ ಲಭ್ಯವಿದ್ದು ಅದರ ಪ್ರಯೋಜನ ಪಡೆದುಕೊಳ್ಳಲು ಸಮುದಾಯದವರಿಗೆ ತಿಳುವಳಿಕೆ ನೀಡಲು ಹೇಳಿದರು.
ಕೆಸಾಪ್ಸ್ ಐ.ಇ.ಸಿ ವಿಭಾಗದ ಜಂಟಿ ನಿರ್ಧೇಶಕರಾದ ಡಾ. ಸಂಜಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಕಲಾತಂಡಗಳಿಗೆ ಕಾರ್ಯಾಗಾರದ ಉದ್ದೇಶ ಗುರಿ ಹಾಗೂ ಹೆಚ್.ಐ.ವಿ. ಏಡ್ಸ್ ನಿಯಂತ್ರಣದಲ್ಲಿ ಜಾನಪದ ಕಲೆಯ ಮಹತ್ವ ಕುರಿತು ವಿವರಿಸಿದರು.
ಜಾನಪದ ಸಂಪನ್ಮೂಲ ವಕ್ತಿಗಳಾದ ಹಿರೇಮಠ ಮಾತನಾಡಿ ಜನಪದ ಕಲೆಯು ಜನರ ನಾಡಿಮಿಡಿತ ಅರಿತಿದ್ದು, ಸಾಮಾನ್ಯ ಜನರ ಬದುಕಿನಲ್ಲಿ ಕೃಷಿಕರ ಕಾರ್ಯದಲ್ಲಿ ಜನರಿಂದ ಜನರ ಮೂಲಕ ಜನಪದ ಕಲೆಯಾಗಿ ಬಂದು ಬೇಸರ ಕಳೆಯುವ, ಕಷ್ಟವನ್ನು ಮರೆಸುವ ಕಲೆಯಾಗಿ ಸಂತೋಷವನ್ನು ಹಂಚಿಕೊಳ್ಳುವ ಸಂಭ್ರಮದವರೆಗೂ ಜನ ಜೀವನದೊಮದಿಗೆ ಬೆರೆತುಕೊಂಡಿದೆ ಎಂದು ಹೇಳಿದರು.
ಕೆಸಾಪ್ಸ್ ನೌಕರರ ಸಂಘ ಜಿಲ್ಲಾ ಘಟಕ ಗದಗ ನೌಕರರು ಮಾನ್ಯ ಯೋಜನಾ ನಿರ್ಧೇಶಕರಾದ ಶ್ರೀಮತಿ ಲೀಲಾವತಿ ಕೆ. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎನ.ಟಿ.ಇ.ಪಿ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದ ಅಶ್ವಥ ರಡ್ಡಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ನಿವಾಸ ಜಿಪಾ ಕೆಸಾಪ್ಸ್ ಸಹಾಯಕ ನಿರ್ದೆಶಕರು ಬೆಂಗಳೂರು, ನಂಜೇಗೌಡ ಸಹಾಯಕ ನಿರ್ಧೇಶಕರು ಕೆಸಾಪ್ಸ್ ಬೆಂಗಳೂರು, ಹೊಸಮನಿ ಬ್ಯಾಂಕ ನಿರ್ಧೇಶಕರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಜಗದೀಶ ನುಚ್ಚಿನ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೆಚ್.ಐ.ವಿ. ಏಡ್ಸ್ ಕಾರ್ಯಕ್ರಮವು ಸರಕಾರದ ಹಂತದಲ್ಲಿ ಸುಮಾರು 2002ರಲ್ಲಿ 2% ಇದ್ದ ಹೆಚ್.ಐ.ವಿ ಸೋಂಕಿನ ಪ್ರಮಾಣ ಈ ವರ್ಷ 0.36% ಕ್ಕೆ ಇಳಿದಿದ್ದು, ಇದಕ್ಕೆ ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿಗಳ ಪರಿಶ್ರಮ ಹಾಗೂ ಮಾದ್ಯಮಗಳಲ್ಲಿ ಪ್ರಚಾರದ ಕಾರ್ಯದಿಂದ ಸಾಧ್ಯವಾಗಿದ್ದು, ಇದರಲ್ಲಿ ಜಾನಪದ ಕಲೆಯ ಕೊಡುಗೆಯು ಸಾಕಷ್ಟಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಜಾನಪದ ಕಲಾತಂಡ ಗುರುನಾಥ ಹುಬ್ಬಳ್ಳಿ ಸಂಗಡಿಗರು ಪ್ರಾರ್ಥಸಿದರು. ಡ್ಯಾಪ್ಕೂ ಅಧಿಕಾರಿಗಳಾದ ಡಾ. ಅರುಂಧತಿ ಕೆ. ಸ್ವಾಗತಿಸಿದರು. ಕೆಸಾಪ್ಸ್ ಐ.ಇ.ಸಿ ವಿಭಾಗದ ಉಪ ನಿರ್ಧೇಶಕರಾದ ಗೋವಿಂದರಾಜ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಇಸಿಟಿಸಿ ಮೇಲ್ವಿಚಾರಕಾದ ಬಸವರಾಜ ಲಾಳಗಟ್ಟಿ ರವರು ವಂದಿಸಿದರು. ( ಫೆÇೀಟೋ ಲಗತ್ತಿಸಿದೆ )