ರಾಜ್ಯ ಮಟ್ಟದ ಚೆಸ್ ತರಬೇತಿ

ಶಿವಮೊಗ್ಗ.ಏ.೨೭; ನಗರದ “ಯಾದವ ಸ್ಕೂಲ್ ಆಪ್ ಚೆಸ್” ರಾಜ್ಯಮಟ್ಟದಲ್ಲಿ ಝೂಮ್ ಆಪ್ ಮೂಲಕ  ಮೇ 1 ರಿಂದ 15 ರವರೆಗೆ ಒಟ್ಟು 15 ದಿನಗಳ ಕಾಲ ಆನ್ ಲೈನ್ ಚೆಸ್ ತರಬೇತಿಯನ್ನು ಪ್ರಾರಂಭಿಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆಯಬಹುದು. ಪ್ರ‍್ರಾಥಮಿಕ ಹಂತ ಪ್ರತಿ ದಿನ ಬೆಳಿಗ್ಗೆ 10 ರಿಂದ 11 ರವರೆಗೆ ಹಾಗೂ 11-30 ರಿಂದ 12-30 ರವರೆಗೆ  ಮದ್ಯಮ ಹಂತ ಪ್ರತಿ ದಿನ ಸಂಜೆ 4 ರಿಂದ 5 ರವರೆಗೆ ಹಾಗೂ 5-30 ರಿಂದ 6-30 ರವರೆಗೆ ಲಭ್ಯವಿದೆ.ಹೆಚ್ಚಿನ ಮಾಹಿತಿಗೆ  ಪ್ರಾಣೇಶ ಯಾದವ್, ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರು, ಯಾದವ ಸ್ಕೂಲ್ ಆಪ್ ಚೆಸ್, ರಾಜೇಂದ್ರನಗರ, ಶಿವಮೊಗ್ಗ. ಮೊಬೈಲ್: 9242401702, 8618108601 ಸಂಪರ್ಕಿಸಬಹುದಾಗಿದೆ.