ರಾಜ್ಯ ಮಟ್ಟದ ಕರೋಕ್ಕೆ ಗಾಯನ ಸ್ಪರ್ಧೆ

ಸಿಂಧನೂರು,ಮಾ.೨೯- ಅಮರ್ ಸ್ವರ ಸಂಗಮ ಸಿಂಧನೂರು ಇವರ ವತಿಯಿಂದ ದಿ.೦೧/೦೪/೨೩ ಹಾಗೂ ೦೨/೦೪/೨೩ ಎರಡು ದಿನ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಂಚಿಕೆ ೬ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿಂಧನೂರಿನ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಚಾಲಕ ಬಸವರಾಜ್ ಗಸ್ತಿ ತಿಳಿಸಿದರು.
ಖ್ಯಾತ ಗಾಯಕ, ಸಂಗೀತ ಹಾಗೂ ಸಾಹಿತ್ಯ ಸಂಘಟಕರಾದ ಬಸವರಾಜ್ ಗಸ್ತಿ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ಈ ಬಾರಿಯು ಕೂಡ ನಗರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಈ ಬಾರಿ ನಗರದ ಖ್ಯಾತ ವೈದ್ಯರಾದ ಡಾ.ಚನ್ನನಗೌಡ ಪೊಲೀಸ್ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ಜನ ಫೈನಲ್ ಹಂತದಲ್ಲಿ ಗಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರಿಗೆ, ಕಲಾವಿದರಿಗೆ ಪ್ರಶಸ್ತಿ,ಸನ್ಮಾನ ಹಾಗೂ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ ೦೧ ಮತ್ತು ೦೨ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮದಲ್ಲಿ ಜಾನಪದ ಗಾರುಡಿಗ, ಸಾಹಿತಿ,ವೆಂಕನಗೌಡ ವಟಗಲ್, ವೀರೇಶ್ ರಾರಾವಿ, ಚಂದ್ರಶೇಖರ್ ಮೈಲಾರ, ನಬಿ ಸಾಬ್ ವಕೀಲರು, ವೀರೇಶ್ ಎರದಿಹಾಳ, ವೀರೇಶ್ ಕಂಬಾಳಿ ಮಠ, ವೀರಭದ್ರಯ್ಯ ರಾರಾವಿ, ಚನ್ನಬಸವ ಗಸ್ತಿ, ಸೋನು ಅಮರ ಆದ್ರಿ ಅವರ ನೇತೃತ್ವದಲ್ಲಿ ಜರುಗಲಿದೆ.
ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ರಾಣೇಬೆನ್ನೂರ್, ಗಜೇಂದ್ರಗಡ,ಬೀದರ್, ಕಲಬುರ್ಗಿ, ರಾಯಚೂರು, ಸುರಪುರ, ಶಾಹಪುರ, ರಾಜ್ಯದ ಅನೇಕ ಕಡೆಯಿಂದ ಸ್ಪರ್ಧೆಗೆ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಬಿಜಾಪುರ ಜಿಲ್ಲೆಯ ಅಥಣಿ ತಾಲೂಕಿನ ಪ್ರಭಾವತಿ ಭಜನಾ ಮಂಡಳಿ ತಂಡದವರಿಗೆ ಪ್ರಭಾವತಿ ಕಿರಣಗಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ನೀಡಲಾಗುವುದು, ಹಾಗೂ ಅವರ ತಂಡದಲ್ಲಿ ಚಿಕ್ಕ ವಯಸ್ಸಿನಲ್ಲಿ ಹಾಡುವಂತ ವಿಜಯಲಕ್ಷ್ಮಿಗೆ ಅಭಿನವ ಪ್ರಶಸ್ತಿ ನೀಡಲಾಗುವುದು ಸೋಫಿಯಾ ಬಿಜಾಪುರ್ ಮತ್ತು ವಿನಾಯಕ್ ಸುತಾರ್, ಹಾಗೂ ಗದಗಿನ ಭಾಗ್ಯಶ್ರೀ ಮತ್ತು ಇನ್ನು ಅನೇಕ ಕಲಾವಿದರು, ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಂಧನೂರಿನ ಎಲ್ಲಾ ಕಲಾಭಿಮಾನಿಗಳು, ಶ್ರೀ ರುದ್ರಗೌಡ ಸ್ಮಾರಕ ಯುವಕ ಮಂಡಳಿ ಸದಸ್ಯರು, ಬೆಳಕು ಸಂಸ್ಥೆಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಹಾಗೂ ನಗರದ ಎಲ್ಲಾ ಸಂಘ ಸಂಸ್ಥೆ ಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಬಸವರಾಜ್ ಗಸ್ತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡರು.