
ಸಿಂಧನೂರು,ಮಾ.೩೧- ಅಮರ ಸ್ವರ ಸಂಗಮದಿಂದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಂಚಿಕೆ-೬ ಕಾರ್ಯಕ್ರಮ ಏಪ್ರಿಲ್ ೧ ಮತ್ತು ೨ ರಂದು ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಮರ ಸ್ವರ ಸಂಗಮದ ಸದಸ್ಯ ಭೀಮೇಶ ಕವಿತಾ ತಿಳಿಸಿದರು.
ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಗಾಯನ ಸ್ಪರ್ಧೆಯಲ್ಲಿ ಬೆಂಗಳೂರು, ಬೆಳಗಾವಿ, ಹಾವೇರಿ, ರಾಣೆಬೆನ್ನೂರು, ಗಜೇಂದ್ರಗಡ, ಬೀದರ್, ಗದಗ, ಕೊಪ್ಪಳ, ಹುಬ್ಬಳ್ಳಿ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ೮೦ ಜನ ಗಾಯಕರು ಭಾಗವಹಿಸಿದ್ದರು. ೨೩ ಜನರು ಆಯ್ಕೆಯಾಗಿದ್ದಾರೆ ಎಂದರು.
ಏ.೧ ರಂದು ಫೈನಲ್, ಏ.೨ ರಂದು ಮೆಗಾಫೈನಲ್ ಸ್ಪರ್ಧೆಗಳು ನಡೆಯಲಿವೆ. ಎರಡು ದಿನವೂ ಬೆಳಿಗ್ಗೆ ೯ ರಿಂದ ೨ ಗಂಟೆಯವರೆಗೆ ಒಳಾಂಗಣ ಹಾಗೂ ಸಂಜೆ ೫ ರಿಂದ ೯.೩೦ ಗಂಟೆಯವರೆಗೆ ಹೊರಾಂಗಣ ವೇದಿಕೆಯಲ್ಲಿ ಗಾಯನ ಸ್ಪರ್ಧೆಗಳು ನಡೆಯಲಿವೆ. ಮುಖ್ಯದ್ವಾರಕ್ಕೆ ದಿ.ಚನ್ನಬಸಯ್ಯಸ್ವಾಮಿ ಹಿರೇಮಠ, ಮುಖ್ಯವೇದಿಕೆಗೆ ರುದ್ರಗೌಡ ಪೊಲೀಸ್ ಪಾಟೀಲ್ ಹಾಗೂ ಶೀನಯ್ಯ ಶೆಟ್ಟಿ ಬಾದರ್ಲಿ ಅವರ ಹೆಸರುಗಳನ್ನು ಇಡಲಾಗಿದೆ. ತೀರ್ಪುಗಾರರಾಗಿ ಚಲನಚಿತ್ರ ಗಾಯಕಿ ಅರ್ಚನಾ ಕುಲಕರ್ಣಿ, ವೈಯಲಿನ್ ವಾದಕಿ ತ್ರಿವೇಣಿ ಹಿರಿಯೂರು, ಗಾಯಕರಾದ ಶೀಲಾ ಪಾಟೀಲ್, ನಾಗರಾಜ ಕಾರಟಗಿ, ಚನ್ನಬಸವ ಗದಗ, ವೀರಭದ್ರ ಬೆನಕನಾಳ, ದೀಪಾ ಮಾನ್ವಿ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.
ಮೆಗಾ ಫೈನಲ್ ಕಾರ್ಯಕ್ರಮದಲ್ಲಿ ಭಜನಾ ಕಲಾ ತಂಡದ ಪ್ರಭಾವತಿ ಬಿಜಾಪುರ, ವಿಜಯಲಕ್ಷ್ಮಿ, ಚಿತ್ರ ಕಲಾವಿದ ವಿನಾಯಕ ಸುತಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಗಾಯನ ಮತ್ತು ನೃತ್ಯಗಾರ್ತಿ ಸೋಫಿಯಾ ಬಿಜಾಪುರ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಐದು ಜನ ವಯಸ್ಕರ ದಂಪತಿಗಳಿಗೆ ಅನನ್ಯ ದಂಪತಿಗಳು ಎಂಬ ಬಿರುದು ನೀಡಿ ಸನ್ಮಾನಿಸಲಾಗುವದು. ಇದೇ ಸಂದರ್ಭದಲ್ಲಿ ಅಮರ ಸ್ವರ ಸಂಗಮದ ಮಾರ್ಗದರ್ಶಕರಾಗಿದ್ದ ಇತ್ತೀಚಿಗೆ ನಿಧನ ರಾದ ಪೂಜಪ್ಪ ಪೂಜಾರಿ ಹಾಗೂ ಸಂದೀಪ್ ಕಾಟ್ವಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.
ವಿವಿಧ ಮಠಗಳ ಮಠಾಧೀಶರು ಸೇರಿದಂತೆ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮತ್ತಿತರ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಆದ್ದರಿಂದ ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಗಳ ಗಾಯಕರು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಮರ ಸ್ವರ ಸಂಗಮದ ಅಧ್ಯಕ್ಷ ಬಸವರಾಜ ಗಸ್ತಿ, ಸದಸ್ಯರಾದ ವೀರೇಶ ರಾರಾವಿ, ವೀರೇಶ ಯರದಿಹಾಳ, ವಾಗೇಶ ಕೋಟೆ, ನಬೀಸಾಬ ವಕೀಲ, ವೀರೇಶ ಕಂಬಳಿಮಠ, ಸೋನು, ಡೈಮಂಡ್ ವೀರಭದ್ರಯ್ಯಸ್ವಾಮಿ, ಅಮರೇಶ ಹೊಸಮನಿ ಸೇರಿದಂತೆ ಇತರರು ಇದ್ದರು.