ರಾಜ್ಯ ಮಟ್ಟದ ಅಬಾಕಸ್ ಚಾಂಪಿಯನ್‌ಶಿಪ್ ನಲ್ಲಿ ಪ್ರಶಸ್ತಿ

ದಾವಣಗೆರೆ.ಸೆ.೧೫: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಚಾಂಪಿಯನ್ ಶಿಪ್‌ನಲ್ಲಿ ಟಿ.ವಿ.ಮೋಹಿತ್ ಪ್ರಥಮ ಸ್ಥಾನ ಮತ್ತು ಟಿ.ವಿ.ಯೋಗಿತ ತೃತೀಯ ಸ್ಥಾನ ಪಡೆದಿದ್ದಾರೆ.ನಗರದ ಸರಸ್ವತಿ ಬಡಾವಣೆಯಲ್ಲಿರುವ ಸೇಂಟ್ ಜಾನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಟಿ.ವಿ.ಮೋಹಿತ್ 5ನೇ ತರಗತಿ ಮತ್ತು ಟಿ.ವಿ.ಯೋಗಿತ 2ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.