ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

ಕೋಲಾರ,ಸೆ,೨೨-ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಸೆ.೨೭ ರಿಂದ ೩೦ ನಡೆಯುವ ಅಂತರ ಜಿಲ್ಲೆಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕೋಲಾರ ಜಿಲ್ಲೆಯಿಂದ ೧೮ ಮಂದಿ ಕ್ರೀಡಾ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ.
ಈ ಕ್ರೀಡಾ ಕೂಟವು ೧೪ ರಿಂದ ೨೩ ವಯಸಿನ ಬಾಲಕ, ಬಾಲಕಿಯರಿಗೆ ಏರ್ಪಡಿಸಲಾಗಿದ್ದು, ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ೧೫ ಮಂದಿ ಬಾಲಕರು ಹಾಗೂ ೩ ಮಂದಿ ಬಾಲಕಿಯರು ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಬಾಲಕರ ವಿಭಾಗದಲ್ಲಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೋಲಾರ ಜಿಲ್ಲೆಯಿಂದ ಎ.ಅಜಿತ್, ಮಿತೇಶ್ ಸಿ.ಜಿ, ಕೆ.ಬಿ.ಸುಮಂತ್, ಆದಿತ್ಯ, ಮನೋಜ್ ನಾಯಕ್, ಆರ್.ಕಮಲೇಶ್, ನಂದನ್.ಆರ್, ನಂದನ್.ಎಂ.ಸಿ, ಮಾರುತಿ ಹೆಚ್.ಎಲ್, ಸಾಯಿ ಮೀತೇಶ್.ಎನ್, ರೋಹನ್.ಆರ್, ಉಜ್ವಲ್.ಕೆ, ವಿದ್ಯಾಸಾಗರ್.ಎಂ, ಚೇತನ್ ಆರ್ಯ.ಜೆ, ಲಲಿತ್ ಪ್ರಸಾದ್.ಆರ್. ಬಾಲಕಿಯರ ವಿಭಾಗದಲ್ಲಿ ಅನಿತಾ.ವಿ, ಅಂಜಲಿ ಡಿ.ಎನ್ ಹಾಗೂ ಭೂಮಿಕಾ.ವಿ ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಗೌರವಾಧ್ಯಕ್ಷ ಹೆಚ್.ಜಗನ್ನಾಥನ್, ಉಪಾಧ್ಯಕ್ಷ ಗೌಸ್‌ಖಾನ್, ಕಾರ್ಯದರ್ಶಿ ರಾಜೇಶ್ ಬಾಬು.ಆರ್, ಕೆ.ಜಿ.ಎಫ್ ರಾಮು ತಿಳಿಸಿದ್ದಾರೆ.