ರಾಜ್ಯ ಮಟ್ಟಕ್ಕೆ ಆಯ್ಕೆ

ಧಾರವಾಡ,ಮಾ.26-ಹೆಬ್ಬಾಳ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟ-2021ರಲ್ಲಿ ಹೆಬ್ಬಾಳ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಧಾರವಾಡದ ಕ.ವಿ.ವಿ.ಯ ರಾಣಿಚನ್ನಮ್ಮಾ ಕ್ರೀಡಾಂಗಣದಲ್ಲಿ ಜರುಗಿದ ಉದ್ಘಾಟನಾ ಸಮಾರಂಭಕ್ಕೆ ಉದ್ಘಾಟಕರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ. ಚಿದಂಬರ, ಅಧ್ಯಕ್ಷಕರಾಗಿ ಎಸ್.ಸಿ.ಎಸ್ ಹೆಬ್ಬಾಳ ಪಿ.ಯು ಕಾಲೇಜಿನ ಚೇರಮನರಾದ ಪೆÇ್ರ. ಜಾವೀದ್ ಮುಲ್ಲಾ, ಮುಖ್ಯ ಅತಿಥಿಗಳಾಗಿ ಡಾ.ಬಿ.ಎಮ್.ಪಾಟೀಲ ನಿರ್ದೇಶಕರು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗ ಕ.ವಿ.ವಿ. ಧಾರವಾಡ. ಗೌರವ ಅತಿಥಿಗಳಾಗಿ ಯು.ಎನ್. ಹಜಾರೆ ಅಧ್ಯಕ್ಷರು ಧಾರವಾಡ ಜಿಲ್ಲಾ ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಧಾರವಾಡ, ಡಾ.ಈಶ್ವರ ಅಂಗಡಿ ಅಂತರಾಷ್ಟ್ರೀಯ ಕಬಡ್ಡಿ ತರಬೇತುದಾರರು, ಎಸ್. ಬಿ ಹೊಸಳ್ಳಿ ನಿವೃತ್ತ ದೈಹಿಕ ಶಿಕ್ಷಕರು, ವ್ಹಿ.ಡಿ. ಪಾಟೀಲ ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಟ್ಯಾಪಟ್ಯಾ ಅಸೋಸಿಯೆಷನ್, .ಡಿ.ವ್ಹಿ.ಗೋವಿಂದಪ್ಪಾ ದೈಹಿಕ ಶಿಕ್ಷಕರು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಹಾಗೂ ಪ್ರಾಚಾರ್ಯರಾದ ಪೆÇ್ರ. ರಮೇಶ ಪರೀಟ ಹೆಬ್ಬಾಳ ಪಿ.ಯು ಕಾಲೇಜು ಧಾರವಾಡ ಹಾಗೂ ಕಾಲೇಜಿನ ಎಲ್ಲ ಭೋದಕ ಹಾಗೂ ಭೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ನವೀನ ಭಂಗಿ ಸ್ವಾಗತಿಸಿದರು. ತ್ರಿವೇಣಿ ಚವ್ಹಾಣ ವಂದಿಸಿದರು, ಡಾ. ಎಂ.ಪಿ.ಜಂಗವಾಡ ನಿರೂಪಿಸಿದರು.