ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ ಸತ್ಯ ಶೋಧನಾ ಸಮಿತಿಯಿಂದ, ಇತ್ತೀಚೆಗೆ ಕೊಲೆಗೀಡಾದ ಹೆಣ್ಣುಮಕ್ಕಳ ಕುಟುಂಬಸ್ಥರಿಗೆ ಭೇಟಿ ನೀಡಿ ಪರಿಶೀಲನೆ

ವಿಜಯಪುರ, ಜೂ.1-ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ರಚಿತವಾದ ಸತ್ಯ ಶೋಧನಾ ಸಮಿತಿಯು ಶ್ರೀಮತಿ. ಭಾರತಿ ವಾಳ್ವೆಕರ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಇವರ ನೇತೃತ್ವದಲ್ಲಿ ದಿನಾಂಕ: 29-05-2021 ರಂದು ಕುದುರಿ ಸಾಲವಾಡಗಿ ಯಲ್ಲಿರುವ ನೊಂದ ಕುಟುಂಬಗಳ ಗೃಹ ಭೇಟಿ ಮಾಡಿ ವಿಚಾರಿಸಿತು.
ಪೆÇೀಷಕರಿಗೆ ಸಾಂತ್ವನ ಹೇಳಿ, ಸತ್ಯ ಶೋಧನಾ ಸಮಿತಿಯ 5 ಸದಸ್ಯರ ತಂಡ ಕುಟುಂಬ ಸದಸ್ಯರನ್ನು ವಿಚಾರಿಸಿ ಈ ಸಾವಿನ ಹಿಂದಿರುವ ಸತ್ಯವನ್ನು ಹೊರ ಹಾಕುವ ಪ್ರಕ್ರಿಯೆ ನಡೆಸಿದರು ಹಾಗೂ ಪೆÇಲೀಸ್ ಇಲಾಖೆಯ ಅಧಿಕಾರಿಗಳಿಂದಲೂ ತನಿಖೆಗೆ ಅವಶ್ಯವಿರುವ ಮಾಹಿತಿಯನ್ನು ಪಡೆದುಕೊಂಡರು.
ನಂತರ ಬಾಲಕಿಯರು ಸಾವಿಗೀಡಾದ ಯಾಳವಾರ ಗ್ರಾಮದಲ್ಲಿರುವ ಬಾವಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ನಂತರ ಪೆÇಲೀಸ್ ಇಲಾಖೆಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಈ ಸತ್ಯ ಶೋಧನಾ ಸಮಿತಿಯಲ್ಲಿ ಶ್ರೀಮತಿ. ಭಾರತಿ ವಾಳ್ವೆಕರ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು. ಡಾ. ಜಯಶ್ರೀ ಕ. ರಾ. ಮ. ಹ. ರ. ಆ. ಬೆಂ. ಹಾಗೂ ಅಶೋಕ್ ಯರಗಲ್ಲ. ಕ.ರಾ.ಮ.ಹ.ರ.ಆ. ಬೆಂ. ಶ್ರೀಧರ ಕುಲಕರ್ಣಿ. ಅಧ್ಯಕ್ಷರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಿಜಯಪುರ ಮತ್ತು ಸದಾಶಿವಯ್ಯ ಅರಕೇರಿಮಠ ಮನಶಾಸ್ತ್ರಜ್ಞ ಹಾಗೂ ಸದಸ್ಯರು ಜಿಲ್ಲಾ ಬಾಲ ನ್ಯಾಯಾಲಯ ಮಂಡಳಿ ವಿಜಯಪುರ ಇದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಶ್ರೀಮತಿ. ಭಾರತಿ ವಾಳ್ವೆಕರ ಇವರಿಗೆ ಆಯೋಗದಿಂದ ಸರಕಾರಕ್ಕೆ ಸಿ.ಓ.ಡಿ ತನಿಖೆಗೆ ಶಿಫಾರಸು ಮಾಡಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ. ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಶ್ರೀಮತಿ ಸುಮಂಗಲಾ ಹಿರೇಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಸಿ. ಮ್ಯಾಗೇರಿ, ಪೆÇಲೀಸ್ ಇಲಾಖೆಯ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಂಯೋಜಕರಾದ ಶ್ರೀಮತಿ. ಸುನಂದಾ ತೋಳಬಂದಿ ಹಾಗೂ ಇತರರು ಉಪಸ್ಥಿತರಿದ್ದರು.