ರಾಜ್ಯ ಬೌದ್ಧರ ಅಭಿವೃದ್ಧಿ ಮಂಡಳಿ ರಚನೆಗೆ ಶಿವಪುತ್ರ ಮಾಳಗೆ ಮನವಿ

ಹುಮನಾಬಾದ್: ಫೆ.25:ಕರ್ನಾಟಕ ರಾಜ್ಯ ಬೌದ್ಧರ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು ಎಂದು ಬುದ್ಧ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರು ಹಾಗೂ ವಿಶ್ವ ಕನ್ನಡ ಸಂಸ್ಥೆಯಿಂದ 65ನೇ ಕರ್ನಾಟಕ ರಾಜ್ಯೋತ್ಸವ ದಿನದಂದು ಬೀದರ ಜಿಲ್ಲಾ ರತ್ನ ಪ್ರಶಸ್ತಿ ಪಡೆದ ಶಿವಪುತ್ರ ಮಾಳಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪನವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಮೊದಲನೆ ಧರ್ಮ ಉದ್ಭವಿಸಿದ್ದು ಅದುವೇ ಬೌದ್ಧ ಧರ್ಮ ಎನ್ನುವದನ್ನು ಮರೆಯದೇ ಕಳಿಂಗ ಯುದ್ಧದಲ್ಲಿ ನಡೆದ ಸೈನಿಕರನ್ನು ನೋಡಿದ ಸಾಮ್ರಾಟ ಅಶೋಕ ಯುದ್ಧವನ್ನು ನಿಲ್ಲಿಸಿ ಶಾಂತಿಗಾಗಿ ಬೌದ್ಧ ಧರ್ಮವನ್ನು ಮೊರೆಹೋಗಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ನಡೆಸಿದ ವಿಶ್ವ ಆಂದೋಲನದಿಂದಾಗಿ ಇಂದು ಕರ್ನಾಟಕದಲ್ಲಿಯೂ ಬೌದ್ಧ ಧರ್ಮ ಬೆಳೆದಿದ್ದು ನಾವು ನೋಡಬಹುದು.
ವಿಶ್ವಕ್ಕೆ ಶಾಂತಿ ಸಾರಿದ ಮಹಾನ್ ಮಾನವತಾವಾದಿ ಗೌತಮ ಬುದ್ಧರ ಕುರುಹುಗಳು ನಾವು ಕರ್ನಾಟಕದಲ್ಲಿ ಎಲ್ಲ ಕಡೆ ನೋಡಬಹುದು. ಮುಂಡುಗೋಡನಲ್ಲಿರುವ ಬೌದ್ಧರ ಸಂಸ್ಕೃತಿಯನ್ನು ಮತ್ತು ಬೌದ್ಧ ಧರ್ಮದ ಪ್ರಚಾರವಾಗಿರುವ ಗುಲಬರ್ಗಾದಲ್ಲಿರುವ ಸನ್ನತಿಯಲ್ಲಿ ಬೌದ್ಧ ಧರ್ಮದ ಅನೇಕ ಕುರುಹುಗಳು ಇವೆ. ಅನೇಕ ಬೌದ್ಧರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಬೌದ್ಧರ ಏಳಿಗೆಗಾಗಿ, ಬೌದ್ಧ ಸಾಹಿತ್ಯಕ್ಕಾಗಿ ಧಾರ್ಮಿಕವಾಗಿ, ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ ಬೌದ್ಧರ ಅಭಿವೃದ್ಧಿ ಮಂಡಳಿ ರಚಿಸುವುದು ಅತೀ ಅವಶ್ಯಕವಾಗಿರುತ್ತದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಹಿಂದ ನೇತಾರರು ಆಗಿರುವ ತಾವುಗಳು ಅನೇಕ ಮಂಡಳಿಗಳನ್ನು ಕರ್ನಾಟಕದಲ್ಲಿ ರಚಿಸಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿರುವ ತಾವುಗಳು ಬೌದ್ಧರ ಏಳಿಗೆಗಾಗಿ ಕರ್ನಾಟಕದಲ್ಲಿ ಬೌದ್ಧರ ಅಭಿವೃದ್ಧಿ ಮಂಡಳಿಯನ್ನು ತಮ್ಮಿಂದ ರಚಿಸಿ ಬೌದ್ಧರ ಏಳಿಗೆಗಾಗಿ ತಾವುಗಳು ಶ್ರಮಿಸುತ್ತಿರೆಂದು ಭರವಸೆ ನೋಡುತ್ತ, ಕೂಡಲೆ ಕರ್ನಾಟಕ ರಾಜ್ಯ ಬೌದ್ದರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಶಿವಪುತ್ರ ಮಾಳಗೆ ಮನವಿ ಪತ್ರದಲ್ಲಿ ಕೋರಿದ್ದಾರೆ.