ರಾಜ್ಯ ಬಿಜೆಪಿ ಕಛೇರಿ : ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು.ಅ.31- ಶಿವ ಭಕ್ತಿಗಾಗಿ ಕಣ್ಣು ನೀಡಿದ ಭೇಡರ ಕಣ್ಣಪ್ಪ, ಗುರುಭಕ್ತಿಗಾಗಿ ಬೆರಳು ನೀಡಿದ್ದು ಏಕಲವ್ಯ, ದೇಶ ಭಕ್ತಿಗಾಗಿ ಪ್ರಾಣ ನೀಡಿದ್ದು ಕುಮಾರ ರಾಮ, ಧರ್ಮಸಾಧನೆಗಾಗಿ ರಾಮಾಯಣ ರಚಿಸಿ ಮಹರ್ಷಿ ವಾಲ್ಮೀಕಿಯಾಗಿ ಚಾರಿತ್ರ್ಯ, ಸಭ್ಯತೆ, ಸಂಪನ್ನತೆ, ಸಹಾನುಭೂತಿ, ಮಾತೃಭಕ್ತಿ, ಪಿತೃಭಕ್ತಿ, ಸಮಭಾವ, ಸಾಮಾರಸ್ಯ, ತಾಳ್ಮೆ, ನ್ಯಾಯ ನೀತಿ, ಈ ಎಲ್ಲಾ ಮಾನವೀಯತೆ ಅಂಶಗಳನ್ನು ಜಗತ್ತಿಗೆ ಮಾರ್ಗದರ್ಶನೀಯವಾಗಿ ನೀಡಿದ ಆದಿಕವಿ ಮಹರ್ಷಿ ವಾಲ್ಮೀಕಿಯ ಜಯಂತಿ ಹಾಗೂ ಕಲ್ಯಾಣ ಕರ್ನಾಟಕವನ್ನು ಒಂದು ಮಾಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ ಹಾಗೂ ರಾಜ್ಯ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ್, ಇನ್ನೋರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಬೆಂಗಳೂರು ಉತ್ತರ ಜಿಲ್ಲೆ ಎಸ್.ಟಿ.ಮೋರ್ಚಾ ಅಧ್ಯಕ್ಷರು ನಾಗರಾಜು, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್.ಟಿ.ಮೋರ್ಚಾ ಅಧ್ಯಕ್ಷರು ನಾರಾಯಣ ಸ್ವಾಮಿ, ಬೆಂಗಳೂರು ಕೇಂದ್ರ ಎಸ್.ಟಿ.ಮೋರ್ಚಾ ಅಧ್ಯಕ್ಷ ಶಿವಶಂಕರ, ಪಕ್ಷದ ಕಾರ್ಯಾಲಯದ ಕಾರ್ಯದರ್ಶಿ ಲೋಕೇಶ್ ಅಂಬೇಕರ್ ಹಾಗೂ ಬೆಂಗಳೂರು ಜಿಲ್ಲಾ ಎಲ್ಲಾ ಎಸ್.ಟಿ.ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.