
ದಾವಣಗೆರೆ. ಮಾ.7; ಬಂಜಾರ ಸಮಾಜದ ಮಹಿಳಾ ನಾಯಕಿ ಹಾಗೂ ಮಾಯಾಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸ್ಥಳೀಯ ಟಿಕೆಟ್ ಆಕಾಂಕ್ಷಿಯಾದ ಶ್ರೀಮತಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ, ಮಾಜಿ ಜಾಲತಾಣದಲ್ಲಿ ಹರಿಬಿಡುತ್ತಿರುವ ಕೆ.ಎಸ್ ಬಸವರಾಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದಪದಾಧಿಕಾರಿಗಳು ಜಿಲ್ಲಾಪೋಲೀಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಎಸ್ಪಿ ಸಿ.ಬಿ ರಿಷ್ಯಂತ್ ಅವರಿಗೆ ದೂರು ಸಲ್ಲಿಸಿದರು.ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಬಂಜಾರ ಸಮಾಜದ ನಾಯಕಿಯಾದ ಶ್ರೀಮತಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಹಿಂದಿನ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಕೆ.ಎಸ್. ಬಸವರಾಜ್ ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಕಿಡಿಗೇಡಿಗಳ ಮೇಲೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಯಾಕೊಂಡ ಮೀಸಲು ಕ್ಷೇತ್ರದಲ್ಲಿ ಶ್ರೀಮತಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರು ಸಾಕಷ್ಟು ಜನಪರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ಷೇತ್ರದ ಎಲ್ಲಾ ಧರ್ಮ,ಜಾತಿ, ಜನಾಂಗದವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿಯಲ್ಲಿ ಶ್ರೀಮತಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಹೆಸರು ಮುಂಚೂಣಿಯಲ್ಲಿದೆ. ಇದನ್ನು ಸಹಿಸದ ಕೆ.ಎಸ್ ಬಸವರಾಜ ಅವರು ರಾಜಕೀಯ ಕಾರಣಗಳಿಂದಾಗಿ ಅವರನ್ನು ತೇಜೋವಧೆ ಮಾಡಲು ಹೊರಟಿದ್ದಾರೆ. ಅವರ ಫೋಟೋಗಳನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಗು ಕ್ಷೇತ್ರದ ಕೆಲ ಜನರಿಗೆ,ಯುವಕರಿಗೆ ತೋರಿಸಿ ಮಾನಹಾನಿ ಮಾಡುವ ನೀಚ ಕೆಲಸವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲ ಕಾಂಗ್ರೆಸ್ ಪಕ್ಷದ ನಾಯಕರಿಗೂ ಅಲ ಚಿತ್ರಗಳನ್ನು ತೋರಿಸಿ ರಾಜಕೀಯವಾಗಿ ತುಳಿಯಲು ಪ್ರಯತ್ನಿಸುತ್ತಿದ್ದಾರೆ,ನಾಗರೀಕ ಸಮಾಜ ತಲೆತಗ್ಗಿಸುವಂತಹ ಈ ರೀತಿಯ ಕೃತ್ಯ ಎಸಗಿರುವ ಕೆ.ಎಸ್. ಬಸವರಾಜ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್,ಕುಬೇರ್ ನಾಯ್ಕ್,ಮಂಜುನಾಯ್ಕ್,ರಾಖಿ,ಯಶವಂತ್,ಹರ್ಷ,ಮಾರುತಿ, ಕವಿತಾಬಾಯಿ ಮತ್ತಿತರರಿದ್ದರು.