ರಾಜ್ಯ ನಾಯಕರ ಯುವ ಸೇನೆ
ಬಳ್ಳಾರಿ ಬಂಡಿಮೋಟ್ ಘಟಕದ ಪದಾಧಿಕಾರಿಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ಕರ್ನಾಟಕ ರಾಜ್ಯ ನಾಯಕರ ಯುವಸೇನೆಯ ಬಳ್ಳಾರಿ ನಗರದ ಬಂಡಿಮೋಟ್ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಗಡ್ಡಂ ತಿಮ್ಮಪ್ಪ ತಿಳಿಸಿದ್ದಾರೆ.
ಈ ಕುರಿತಂತೆ ಪದಾಧಿಕಾರಿಗಳ ಆದೇಶ ಪತ್ರವನ್ನು ಪ್ರಕಟಿಸಿದ್ದು, ಬಂಡಿಮೋಟ್ ಘಟಕದ ಗೌರವಾಧ್ಯಕ್ಷರಾಗಿ ಬಿ.ಆಂಜನೇಯ, ಅಧ್ಯಕ್ಷರಾಗಿ ಬಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಎನ್.ಸೀನ, ಪ್ರಧಾನ ಕಾರ್ಯದರ್ಶಿ ರಮೇಶ್ ಬಿ., ಖಜಾಂಚಿಯಾಗಿ ಹನುಮಂತರಾಯ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿ.ನರಸಿಂಹಲು, ಕಾರ್ಯದರ್ಶಿ ಆಂಜಿನಯ್ಯ, ಕಾರ್ಯದರ್ಶಿ ಪ್ರಕಾಶ್, ಕಾರ್ಯದರ್ಶಿ ಬಿ.ಅಶೋಕ್, ಕಾರ್ಯದರ್ಶಿ ಬಿ.ರಾಮಾಂಜಿ, ಕಾರ್ಯದರ್ಶಿ ವಿ.ಹೆಚ್.ವಂಶಿ ಕೃಷ್ಣ, ಕಾರ್ಯದರ್ಶಿ ಬಿ.ಅನಿಲ್, ಕಾರ್ಯದರ್ಶಿ ಸುಧಾಕರ, ಕಾರ್ಯದರ್ಶಿ ಆನಂದ, ಕಾರ್ಯದರ್ಶಿ ಎಸ್.ರಾಜ, ಕಾರ್ಯದರ್ಶಿ ಬಿ.ಸಾಯಿರಾಮ್, ಕಾರ್ಯದರ್ಶಿ ಎನ್.ಪವನ್, ಕಾರ್ಯದರ್ಶಿ ಬಿ.ಯಂಕಪ್ಪ, ಕಾರ್ಯದರ್ಶಿ ಬಿ.ರಾಮಚಂದ್ರ, ಕಾರ್ಯದರ್ಶಿ ಬಿ.ಅರುಣ್ ಕುಮಾರ್, ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಬಿ.ಚಿತ್ತಪ್ಪ, ಬಳ್ಳಾರಿ ಜಿಲ್ಲಾ ಖಜಾಂಚಿಯಾಗಿ ಬಿ.ಹನುಮಂತ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ನೇಮಕಗೊಂಡ ನೂತನ ಪದಾಧಿಕಾರಿಗಳು ಜನಾಂಗದ ಸಂಘಟನೆಯನ್ನು ಬಲಪಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸುವಂತೆ ಗಡ್ಡಂ ತಿಮ್ಮಪ್ಪ ಕರೆ ನೀಡಿದ್ದಾರೆ.

Attachments area