ರಾಜ್ಯ ನಾಯಕತ್ವ ಬದಲಾವಣೆ ಊಹಾಪೆÇೀಹ: ಸುರ್ಜೆವಾಲ

ಸಂಜೆವಾಣಿ ನ್ಯೂಸ್
ಮೈಸೂರು: ಏ.22:- ಲೋಕಸಭಾ ಚುನಾವಣೆನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬುವುದು ಕೇವಲ ಊಹಾಪೆÇೀಹ ಅಷ್ಟೇ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟಪಡಿಸಿದರು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ನಾಯಕತ್ವ ಬದಲಾವಣೆ ಹೇಳಿಕೆ ಯಾರು ನಂಬಬೇಡಿ, ಇದರ ಬಗ್ಗೆ ಸಚಿವರು ನೀಡಿರುವ ಹೇಳಿಕೆ ಅವರ ವೈಯಕ್ತಿಕವೆಂದರು. ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ದ್ಯೇಯವಾಗಿದೆ. ಬಿಜೆಪಿ ಪಕ್ಷವು ದಲಿತ, ರೈತ, ಮಹಿಳಾ ವಿರೋಧಿಯಾಗಿದೆ. ಚುನಾವಣೆಯ ನಂತರ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನ ನಿಲ್ಲಿಸುತ್ತಾರೆ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ಯಾವುದೇ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಮುಂದುವರೆಯುತ್ತದೆ. ಜೊತೆಗೆ ಜೂ.4ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದ್ದು, ಮೋದಿ ಸರ್ಕಾರ ಅಂತ್ಯವಾಗಿಲಿದೆ.
ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆ ಮೂಲಕ 1ಲಕ್ಷ ಕೊಡುತ್ತೇವೆ. ಇದರಲ್ಲಿ ಕರ್ನಾಟಕ ರಾಜ್ಯದ 2ಸಾವಿರ ಜೊತೆಗೆ ಕೇಂದ್ರದ 8 ಸಾವಿರ ಹಣ ಸೇರಿ ಒಟ್ಟು 10ಸಾವಿರ ಹಣ ಸಿಗಲಿದೆ. ರಾಜ್ಯದ ಜನರಿಗೆ ಡಬಲ್ ಧಮಾಕ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ಬಿಜೆಪಿ 400 ಸೀಟ್ ಬಂದರೆ ಸಂವಿಧಾನ ಬದಲಾಯಿಸುವ ಮಾತುನ ಕೆಲವು ನಾಯಕರು ಮಾತನಾಡುತ್ತಾ ಇದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಏಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಆಯುಕ್ತರನ್ನ ನೇಮಕ ಮಾಡಲು ಸಮಿತಿ ಇದೆ. ಆ ಸಮಿತಿಯಲ್ಲಿ ಮೋದಿ ಅವರು ಸಹ ಇದ್ದಾರೆ. ಇವರು ಹೇಳಿದ್ದಂತೆ ಚುನಾವಣಾ ಆಯೋಗ ನಟಿಸುತ್ತಾ ಇದ್ದೆ ಎಂದು ಟೀಕಿಸಿದ್ದರು.
ವಿವಿ ಪ್ಯಾಟ್ ಏಣಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುರ್ಜೆವಾಲ. ನಾನು ಭಾರತೀಯ ಪ್ರಜೆಯಾಗಿ ಸುಪ್ರೀಂಕೋರ್ಟ್ ಗೆ ಪ್ರಶ್ನೆ ಕೇಳುತ್ತೇನೆ. ಇಗಿಒ ಸರಿ ಇದ್ದ ಮೇಲೆ ವಿವಿ ಪ್ಯಾಟ್ ಖರೀದಿಸಿದ್ದು ಯಾಕೆ ? ಇಗಿಒ ಸರಿಯಾಗಿ ವೋಟ್ ಆಗಿದ್ದಾರೆ. ವಿವಿ ಪ್ಯಾಟ್ ನಲ್ಲಿ ಶೇಕಡಾ 5 ರಷ್ಟು ಎಣಿಕೆ ಏಕೆ ಬೇಕು. ಶೇಕಡಾ 5 ರಷ್ಟು ಏಣಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವಿವಿ ಪ್ಯಾಟ್ ಏಕೆ ಖರೀದಿ ಮಾಡಬೇಕಿತ್ತು. ಬಿಜೆಪಿ ಅವರು ವಿವಿ ಪ್ಯಾಟ್ ಎಣಿಕೆಗೆ ವಿರೋಧ ವ್ಯಕ್ತಪಡಿಸುತ್ತಾ ಇರುವುದು ಏಕೆ ಎಂದು ಸುರ್ಜೆವಾಲ ಪ್ರಶ್ನಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‍ಸೇಠ್, ಸಚಿವ ಕೆ.ವೆಂಕಟೇಶ್, ಶಾಸಕರಾದ ಹರೀಶ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಶಾಸಕ ಯತೀಂದ್ರಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನಗರಾಧ್ಯಕ್ಷ ಆರ್.ಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಎಂಎಲ್‍ಸಿ ಮರಿತಿಬ್ಬೇಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‍ಖಾನ್, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾದ್ಯಮ ವಕ್ತಾರ ಮಹೇಶ್, ಓಬಿಸಿ ಮೋರ್ಷ ಅಧ್ಯಕ್ಷ ನಾಗೇಶ್ ಇನ್ನಿತರರು ಉಪಸ್ಥಿತರಿದ್ದರು.