ರಾಜ್ಯ ತೆರಿಗೆ ಸಲಹೆಗಾರರ ಸಂಘಕ್ಕೆಜಂಬಿಗಿ ರಾಧೇಶ್ ಆಯ್ಕೆ

 
ದಾವಣಗೆರೆ. ಡಿ.೧;  ದೊಡ್ಡಬಳ್ಳಾಪುರದಲ್ಲಿ ನಡೆದ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಎಸ್ . ನಂಜುಂಡಪ್ರಸಾದ್ ಆಯ್ಕೆಯಾಗಿದ್ದಾರೆ . ಇವರೊಂದಿಗೆ ಹೆಚ್ಚಿನ ಮತ ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಜಂಬಿಗಿ ರಾಧೇಶ್ ಆಯ್ಕೆಯಾಗಿದ್ದಾರೆ , ಮೈಸೂರು ವಲಯ ಉಪಾಧ್ಯಕ್ಷರಾಗಿ ಟಿ.ಪಿ. ಪ್ರಕಾಶ್ , ಪ್ರಧಾನ ಕಾರ್ಯದರ್ಶಿಯಾಗಿ ಮುಕುಂದ ಪೋಸ್ , ಖಜಾಂಚಿಯಾಗಿ ಸೋಮಲಿಂಗಪ್ಪ ಸೋಲಾರಗುಪ್ಪ , ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಕೆ.ಸಿ. ಆನಂದ್ ಆಯ್ಕೆಯಾಗಿದ್ದಾರೆ . ಬೆಳಗಾವಿ ವಲಯ ಉಪಾಧ್ಯಕ್ಷರಾಗಿ ಪ್ರಶಾಂತ್ ವಿ ಹಂಚಾಟೆ , ಕಲಬುರ್ಗಿ ವಲಯ ಉಪಾಧ್ಯಕ್ಷರಾಗಿ ಪ್ರಶಾಂತ್ ಚಿಟೆಗೇಪರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾದ ಜಂಬಿಗಿ ರಾಧೇಶ್ ತಿಳಿಸಿದ್ದಾರೆ .