ರಾಜ್ಯ ಚುನಾವಣಾ ಆಯುಕ್ತ ಡಾ.ಸಂಜೀವ್‍ಕುಮಾರ ಹಂಪಿಗೆ ಭೇಟಿ

ಹೊಸಪೇಟೆ ಮಾ24: ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಡಾ. ಸಂಜೀವಕುಮಾರ ಅವರು ಕುಟುಂಬ ಸಮೇತ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ದೇವಸ್ಥಾನದ ಪಟ್ಟದ ಆನೆ ಲಕ್ಷ್ಮೀ ಅವರಿಗೆ ಮಾಲಾರ್ಪಣೆ ಮಾಡಿ ಪಂಪಾಕ್ಷೇತ್ರಕ್ಕೆ ಆಗಮಿಸಿದ ಡಾ.ಸಂಜೀವ್‍ಕುಮಾರ್ ಕುಟುಂಬವನ್ನು ಸ್ವಾಗತ ಮಾಡಿತು. ಆನೆಯ ನಡೆ ಕಂಡು ಸಂಜೀವಕುಮಾರ ಅವರು ಹರ್ಷಚಿತ್ತರಾದರು. ಬಳಿಕ ಅವರು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಜಯನಗರ ಆಳರಸರ ಕಾಲದ ಸ್ಮಾರಕಗಳ ಕೆತ್ತನೆ ವೀಕ್ಷಿಸಿದರು.
ವಿಜಯ ವಿಠ್ಠಲ ದೇಗುಲ, ಕಲ್ಲಿನತೇರು, ಉಗ್ರ ನರಸಿಂಹ, ಶಿವ ದೇವಾಲಯ ಮತ್ತು ಶ್ರೀ ವಿರೂಪಾಕ್ಷೇಶ್ವರ ದೇಗುಲ ವೀಕ್ಷಿಸಿದರು. ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಹಂಪಿಗೆ ತೆರಳುವ ಮುನ್ನ ಟಿಬಿಡ್ಯಾಂನ ವೈಕುಂಠ ಅತಿಥಿಗೃಹದಲ್ಲಿ ಚುನಾವಣೆ ಆಯುಕ್ತರು ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆ ಸಿದ್ಧತೆ ಬಗ್ಗೆ ವಿಶೇಷ ಸಭೆ ನಡೆಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಬಳ್ಳಾರಿ ಉಪವಿಭಾಗಾಧಿಕಾರಿ ರಮೇಶ ಕೋನರಡ್ಡಿ, ಹೊಸಪೇಟೆ ತಹಸೀಲ್ದಾರ್ ಎಚ್. ವಿಶ್ವನಾಥ, ಕೂಡ್ಲಿಗಿ ಮಹಾಬಲೇಶ್ವರ ಮತ್ತಿತರರಿದ್ದರು.