ರಾಜ್ಯ ಗುತ್ತಿಗೆದಾರರ ಉಗ್ರ ಹೋರಾಟಜ. 18 ರಂದು ಬೆಂಗಳೂರ ಚಲೋ

ಕಲಬುರಗಿ:ಜ.11: ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಡಿ. ಕೆಂಪಣ್ಣನವರ ನೇತೃತ್ವದಲ್ಲಿ ಜ.18ರಂದು ಬೆಂಗಳೂರಿನಲ್ಲಿ ರಾಜ್ಯ ಗುತ್ತಿಗೆದಾರರ ಉಗ್ರ ಹೋರಾಟವನ್ನು ಹಮ್ಮಿಕೋಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ಹೇಳಿದರು.

ನಗರದ ಪಬ್ಲಿಕ ಗಾರ್ಡನ್ ಹತ್ತಿರ ಯಾತ್ರಿಕ ನಿವಾಸದಲ್ಲಿ ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಹೋರಾಟದ ಕುರಿತು ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕು ಮತ್ತು ಕೆ.ಇ.ಬಿ ಗುತ್ತಿಗೆದಾರರು, ಎಸ್.ಟಿ/ಎಸ್.ಟಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕೇಶರ್ ಅಶೋಷನ್ ಅಧ್ಯಕ್ಷರು, ಸದಸ್ಯರು, ಪ್ರಾವೇಟ ಬಿಲ್ಡರ್ಸ ಮತ್ತು ಡೆವಲರ್ಸಗಳು ಗುತ್ತಿಗೆದಾರರ ಪೂರ್ವಭಾವಿ ಸಭೆ ಜರುಗಿತು.

ಈ ಸಭೆಯಲ್ಲಿ ಗುತ್ತಿಗೆದಾರರ ಬಾಕಿ ಇರುವ ಪಾವತಿಸುವ ಎಲ್ಲಾ ಬಿಲ್ಲುಗಳನ್ನು, ಗುತ್ತಿಗೆದಾರರ ಹಳೆಯ ಬಿಲ್ಲುಗಳಿಗೆ ಶೇಕಡಾ 18% ರಷ್ಟು ಜಿ.ಎಸ್‍ಟಿ ಸೇರಿಸಿ ಬಿಲ್ಲನ್ನು ಪಾವತಿಸಬೇಕು. ಕಲ್ಯಾಣ ಕರ್ನಾಟಕ ಮಂಡಳಿಯಿಂದ (ಕೆ.ಕೆ.ಆರ್.ಡಿ.ಬಿ) ಟೆಂಡರದಲ್ಲಿ ಹಾಗೂ ಬಿಲ್ ನಲ್ಲಿ ಶೇಕಡಾ 18ರಷ್ಟು ಜಿ.ಎಸ್‍ಟಿ ಕೊಡಬೇಕು,

ಕಲ್ಯಾಣ ಕರ್ನಾಟಕದಲ್ಲಿ ಕಾಮಗಾರಿಯು ಪೂರ್ಣಗೊಳಿಸಿದರು ಬಿಲ್ಲ ಇನ್ನು ಫೈನಲ್ ಆಗಿಲ್ಲವೆಂದು ನೆಪ ಒಡ್ಡಿ 20% ತಡೆ ಹಿಡಿಯುತ್ತಾರೆ, ಅದನ್ನು ತೆಗೆದು ಹಾಕುಬೇಕು.

ಕರ್ನಾಟಕ ಕ್ರಶರ್ ಸಂಘದವರು ಮಾಡುತ್ತಿರುವ ಚಳುವಳಿಯ ಬಗ್ಗೆ ನಮ್ಮ ಕಲಬುರಗಿ ಕಾಂಟ್ರೇಕ್ಟರ ಅಶೋಷನ್ ವತಿಯಿಂದ ಅವರಿಗೆ ಸಹಕಾರ ಕೊಡಬೇಕು, ಸರ್ಕಾರದ ಹಾಗೂ ಕೋರ್ಟಿನ ಆದೇಶದ ಪ್ರಕಾರ ಪ್ರೇಮಿಂಟನ್ನು ಜೇಷ್ಠತೆ ಆಧಾರದ ಮೇಲೆ ಕೊಡಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.

ಗುತ್ತಿಗೆದಾರರು ಎಲ್ಲಾ ಬೇಡಿಕೆಗಳನ್ನು ಜ. 18 ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದ ಮೂಲಕ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಸಂಘವತಿಯಿಂದ ಸರ್ಕಾರದ ಗಮನಕ್ಕೆ ತರಲಾಗುವುದು. ಕಾಂಟ್ರಾಕ್ಟರ್ ಗಳ ಅಳಿವು ಉಳಿವಿನ ಪ್ರಶ್ನೆ ಆಗಿರುವುದರಿಂದ ಎಲ್ಲ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಜಗನ್ನಾಥ ಬಿ. ಶೇಗಜಿ ಹೇಳಿದರು.

ಈ ಸಭೆಯಲ್ಲಿ ಉಪಾಧ್ಯಕ್ಷರಾದ ಎನ್.ಎಸ್.ಮೂಲಗೆ, ಮೊಹಸಿನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ್.ಆರ್.ಕೆ., ಕೆ.ಪಿ.ಎಸ್.ಸಿ ಸದಸ್ಯ ಎಂ.ಕೆ.ಪಾಟೀಲ, ಮನಸೂರ ಪಟೇಲ್, ಗುರುನಂಜಯ್ಯಾ ಆರ್.ಜಿ, ಜೈಕುಮಾರ ದೇವಲಗಾಂವಕರ್ ಇತರರು ಇದ್ದರು