ರಾಜ್ಯ ಕಾರ್ಯದರ್ಶಿಯಾಗಿ ಜಿ ದಾದಾಪೀರ್ ನೇಮಕ

ಸಂಜೆವಾಣಿ ವಾರ್ತೆ

ಹಿರಿಯೂರು : ಫೆ.21-ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ಹಿರಿಯೂರಿನ ಜಿ ದಾದಾಪೀರ್ ರವರು ರಾಜ್ಯ ಕಾರ್ಯದರ್ಶಿಯಾಗಿ  ನೇಮಕವಾಗಿದ್ದಾರೆ.   ಎಐಸಿಸಿ ಜಂಟಿ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ಉಸ್ತುವಾರಿ ಶ್ರೀಕೃಷ್ಣ ಅಲ್ಲವಾರು ಹಾಗೂರಾಷ್ಟ್ರೀಯ ಯುವ  ಕಾಂಗ್ರೆಸ್ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಬಂಟಿ ಶಿಲ್ಕೆ ಇವರ ಸೂಚನೆ ಮೇರೆಗೆ  ರಾಜ್ಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಮಹಮ್ಮದ್ ನಲಪಾಡ್ ಇವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಿರುತ್ತಾರೆ. ಹಿರಿಯೂರಿನ ಜಿ ದಾದಾಪೀರ್ ಅವರು ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು  ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಹಲವಾರು ಸಂಘ ಸಂಸ್ಥೆಗಳಲ್ಲಿ ಉತ್ತಮ ಸಮಾಜಮುಖಿ ಸೇವೆಯನ್ನು ಸಲ್ಲಿಸಿ ಜನಾನುರಾಗಿಯಾಗಿದ್ದಾರೆ ಜಿ ದಾದಾಪೀರ್ ಅವರಿಗೆ ಅನೇಕ ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.