ರಾಜ್ಯ ಎಸ್.ಸಿ ಎಸ್.ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದಲ್ಲಿ  ರಾಜ್ಯೋತ್ಸವ ಆಚರಣೆ

ಸಂಜೆವಾಣಿ ವಾರ್ತೆ

ಜಗಳೂರು.ನ.೫; ಮೈಸೂರು ಸಂಸ್ಥಾನದಿoದ ವಿಭಜನೆಯಾಗಿ ಏಕೀಕರಣದ ಮೂಲಕ ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡು ಇಂದಿಗೆ 5೦ ವರ್ಷಕ್ಕೆ ಪಾದಾರ್ಪಣೆ ಮಾಡಿ ದ ಹಿನ್ನಲೆಯಲ್ಲಿ ಇಡೀ ಕರ್ನಾಟಕ ಸಂಭ್ರಮದಿoದ ಕನ್ನಡ ರಾ ಜ್ಯೋ ತ್ಸವವನ್ನು ಆಚರಿಸುತ್ತಿದೆ ಪ್ರತಿಯೊಬ್ಬರೂ ನಾಡು ನುಡಿಯ ಬಗ್ಗೆ ಅಪಾರವಾದ ಅಭಿಮಾನವನ್ನು ಇಟ್ಟುಕೊಳ್ಳಬೇಕೆಂದು ತಹ ಶೀಲ್ದಾರ್ ಸಯದ್ ಕಲೀಂವುಲ್ಲಾ ಹರ್ಷವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ವರ ದಿಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿ ಕೊಳ್ಳಲಾಗಿ ದ್ದ ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು ತಾಲೂಕಿನಲ್ಲಿ ಎಸ್ಸಿ ಎಸ್ಟಿ ಪತ್ರಕರ್ತರ ಸಂಘದವತಿ ಯಿಂದ ಕರ್ನಾ ಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಅವರಲ್ಲಿ ರುವ ದೇಶಾಭಿ ಮಾನದ ಪ್ರತೀಕವಾಗಿದೆ ಸಂಘದ ಸರ್ವ ಸದಸ್ಯರು ಒಗ್ಗ ಟ್ಟಿನಿಂದ ಇದ್ದು ಸಂಘದ ಸವಾಂಗೀಣ ಏಳ್ಗೆಗೆ ಶ್ರಮಿಸುವ ಮೂಲ ಕ ನೊಂದ ವರ ನೆರವಿಗೆ ಧಾವಿಸಿ ನ್ಯಾಯ ದೊರಕಿಸಿ ಕಷ್ಟ ದಲ್ಲಿ ರು ವ ಜನರಿಗೆ ಸ್ಪಂದಿಸುವoತಾಗ ಬೇಕು ಸಮಾಜದಲ್ಲಿ ನಡೆ ಯುವ ಆಗು ಹೋ ಗುಗಳ ಬಗ್ಗೆ ನೇರ ಮತ್ತು ನಿಷ್ಟುರವಾಗಿ ಸುದ್ಧಿ ಯನ್ನು ಪ್ರಕಟಿಸಿ ಸಮಾಜವನ್ನು ಸರಿದಾರಿಗೆ ತರುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖ ವಾಗಿದೆ ಎಂದರು.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು ಶೇ.೬೦ರಷ್ಟು ಪಜಾತಿ ಮತ್ತು ಪವರ್ಗದ ಪತ್ರಕರ್ತರು ಇದ್ದರೂ ಸಹ ಸರಕಾರದ ಯಾ ವುದೇ ಯೋಜನೆಗಳಿಂದ ವಂಚಿತರಾಗಿದ್ದ ಹಿನ್ನಲೆಯಲ್ಲಿ ಇದೀಗ ಸಂಘವನ್ನು ಕಟ್ಟಿಕೊಂಡಿದ್ದು ಎಲ್ಲಾ ಪತ್ರಕರ್ತರೊಂದಿಗೆ ವಿಶ್ವಾಸ ದಿಂದ ಇದ್ದು ತಮಗೆ ಬರುವ ಸರಕಾರದ ಸೌಲಭ್ಯಗಳನ್ನು ಪಡೆದು ಕೊಂಡು ಸಮಾಜಮುಖಿ ಸುದ್ಧಿಗಳನ್ನು ಬಿತ್ತರಿಸುವ ಕೆಲಸ ಮಾಡ ಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾ ಭಿವೃದ್ಧಿ ಸಂಘದ ಗೌರವಾದ್ಯಕ್ಷ ದೊಡ್ಡಬೊಮ್ಮನಹಳ್ಳಿ ಸಿ.ಬಸವರಾಜ್, ರಾಜ್ಯಾಧ್ಯಕ್ಷ ಹನುಮಂತಾಪುರ ಹೆಚ್.ಆರ್. ಬಸ ವರಾಜ್, ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಹಟ್ಟಿ ಒ.ಮಂಜಣ್ಣ, ಉಪಾಧ್ಯಕ್ಷ ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪ, ಹೆಚ್.ಎಂ.ಹೊಳೆ ಧನ್ಯಕುಮಾರ್, ಸಹ ಕಾರ್ಯದರ್ಶಿ ಮರೇನಹಳ್ಳಿ ಬಾಬು,ಎ.ಕೆ.ಮಾರಪ್ಪ.ಖಜಾಂಚಿ ಪಾಲನಾಯಕನಕೋಟೆ ಬಿ.ಓ.ಮಾ ರುತಿ, , ಸಂಘಟನಾ ಕಾರ್ಯದರ್ಶಿ ಸಿದ್ದಮ್ಮನಹಳ್ಳಿ ಬಸವರಾಜ್, ಮಾದಿ ಹಳ್ಳಿ ಮಂಜುನಾಥ್, ಕಾನೂನು ಸಲಹೆಗಾರ ಗೋಗುದ್ದು ತಿಪ್ಪೇ ಸ್ವಾಮಿ, ಸಿ.ಎಂ.ಹೊಳೆ ಸಂದೀಪ್, ಸೊಕ್ಕೆ ಜಗದೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.