ರಾಜ್ಯ ಉಪಾಧ್ಯಕ್ಷರಾಗಿ ಡಿ.ಎಂ.ಮನಂಜುನಾಥಯ್ಯ ಆಯ್ಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫: ಈಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ಹರಿಹರ ತಾಲ್ಲೂಕಿನ ಧೂಳೇಹೊಳೆ ಜಿಎಂಸಿಜಿ ಪ್ರೌಢಶಾಲೆ ಸಹ ಶಿಕ್ಷಕ ಡಿ.ಎಂ.ಮAಜುನಾಥಯ್ಯ ಆಯ್ಕೆಯಾಗಿದ್ದಾರೆ.ಸಂಘದ ರಾಜ್ಯಾಧ್ಯಕ್ಷರಾದ ಸಿದ್ದಬಸಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ದಾವಣಗೆರೆ ಜಿಲ್ಲಾಧ್ಯಕ್ಷ ಮುಬಾರಕ್ ಅಲಿ, ಕಾರ್ಯದರ್ಶಿ ದ್ವಾರಕೇಶ ನಾಯ್ಕ, ಗೌರವಾಧ್ಯಕ್ಷ ಸಿದ್ದಪ್ಪ ಜಿಗಣಪ್ಪನವರ, ಗೌರವ ಸಲಹೆಗಾರ ಬಿ.ಆರ್.ಚಂದ್ರಪ್ಪ, ಕೆ.ಎನ್ ಸಿದ್ದಪ್ಪ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು, ಉಪನಿರ್ದೇಶಕರಾದ ಜಿ.ಆರ್.ತಿಪ್ಪೇಶಪ್ಪ ಅಭಿನಂದಿಸಿದ್ದಾರೆ.