ರಾಜ್ಯ ಅಂಗವಿಕಲರ ಹಿತ ರಕ್ಷಣ ಸಮಿತಿಯ ಬೆಂಬಲ

ಬೀದರ:ಜ.19:ಕಾರಂಜಾ ಮುಳುಗಡೆ ಸಂತ್ರಸ್ಥರ ಹಿತ ರಕ್ಷಣ ಸಮಿತಿ ಸಮಗ್ರ ಅಭೀವೃದ್ಧಿ ಜಂಟಿ ಕ್ರೀಯಾ ಸಮಿತಿ ವತಿಯಿಂದ ರೈತರ ಬೇಡಿಕೆಗಳ ಇಡೆರಿಕೆಗಾಗಿ ನಿರಂತರ ಧರಣಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಿತ ರಕ್ಷಣ ಸಮಿತಿಯು ಜನೇವರಿ 18 ರಂದು ಬೀದರ ನಗರದ ಅಂಬೇಡ್ಕರ್ ವೃತ್ತ ಹತ್ತಿರ ನಡೆಯುತ್ತಿರುವ ಧರಣಿಯಲ್ಲಿ ಒಂದು ದಿವಸ ಬೆಂಬಲ ನೀಡಲಾಗುತ್ತಿದ್ದು.

ಈ ಧರಣಿಯ ಮುಖಾಂತರ ಕಾರಂಜಾ ಮುಳುಗಡೆ ಸಂತ್ರಸ್ಥರ ಹಿತರಕ್ಷಣ ಸಮಿತಿ ಸಮಗ್ರ ಅಭೀವೃದ್ಧಿ ಜಂಟಿ ಕ್ರೀಯಾ ಸಮಿತಿಯ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಕರ್ನಾಟಕ ರಾಜ್ಯ ಅಂಗವಿಕಲರ ಹಿತ ರಕ್ಷಣ ಸಮಿತಿಯು ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಿತ ರಕ್ಷಣ ಸಮಿತಿಯ ರಾಜ್ಯಾಧ್ಯಕ್ಷರಾದ ರಾಜಪ್ಪಾ ಪಾತರಪಳ್ಳಿ, ಗೌರವಾಧ್ಯಕ್ಷರಾದ ರಾಜಕುಆರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಶಿವಕಮಾರ, ಜಿಲ್ಲಾಧ್ಯಕ್ಷರಾದ ಪ್ರಭು ಆರ್ ಕಲಾಲ, ಸಾಯಿನಾಥ ಮೈಲೂರ, ಅಹ್ಮದ ಪಾಶಾ, ಮಹ್ಮದ ಶಾಖಿರ, ಅಶ್ವಿನಿ ಮೈಲೂರ ಇದ್ದರು.