ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ 4ನೇ ಸಮ್ಮೇಳನ

ವಿಜಯಪುರ ಜು.18- ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಸಂಯೋಜಿತ ವಿಜಯಪುರ ಜಿಲ್ಲಾ ಸಮಿತಿ 4ನೇ ಸಮ್ಮೇಳನವು ವಿಜಯಪುರದ ಶಿವಶರಣೆ ನಿಂಬೆಕ್ಕಾ ಕಲ್ಯಾಣ ಮಂಟಪ ಜಲನಗರ ವಿಜಯಪುರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸುನಂದಾ ಮಾತನಾಡಿದರು ಇವತ್ತಿನ ದಿವಸ ಕೇಂದ್ರ ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರಿಗೆ ಕಾಯಂಮಾತಿ ಮಾಡಬೇಕು. ಮಾಡುವವರೆಗೆ ನಿಮ್ಮಗೆ ಕನಿಷ್ಠ ವೇತನ ಜಾರಿಗೆ ಮಾಡಬೇಕು. ಸುಪ್ರೀಂಕೋರ್ಟ್ ಅಂಗನವಾಡಿ ನೌಕರರಿಗೆ ಗ್ರಾಜುಟಿ ನೀಡಬೇಕು ಎಂದು ಆಗ್ರಹಿಸಿದರು. ಈ ಎರಡು ಸರ್ಕಾರ ಅಂಗನವಾಡಿ ನೌಕರರಿಗೆ ತಾರಾತಮ್ಯ ಮಾಡುತ್ತಿವೆ. ಆದಕಾರಣ ಸುಪ್ರೀಂಕೋರ್ಟ್ ಆದೇಶ ಜಾರಿಗೆ ತರಲು ಆಗ್ರಹಿಸಿ ಇದೆ ಜುಲೈ 26 27 28 ದೆಹಲಿ ಚಲೋ ಹಮ್ಮಿಕೊಂಡಿದ್ದು ವಲಯವಾರು 5 ಜನರು ಕಡ್ಡಾಯವಾಗಿ ಬರೀಬೇಕು ಅಂತ ಮಾತನಾಡಿದರು.
ರಾಜ್ಯದ ಕಾರ್ಯಾಧ್ಯಕ್ಷರಾದ ಕಾಮ್ರೇಡ್ ಶಾಂತಾ ಘಂಟೆ ಅವರು ಸಂಘಟನೆ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಮ್ರೆಡ್ ಭೀಮಶಿ ಕಲಾದಗಿ ಹಾಗೂ ಅಣ್ಣಾರಾಯ ಈಳಗೇರ ಸಮ್ಮೇಳನಕ್ಕೆ ಶುಭ ಕೋರಿ ಮಾತನಾಡಿದರು.
ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಹೊಸ ವಿಜಯಪುರ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಸುನಂದಾ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ತಳವಾರ, ಖಜಾಂಚಿಯಾಗಿ ಪ್ರತಿಭಾ ಕುರಡೆ, ಗೌರವಾಧ್ಯಕ್ಷರಾಗಿ ಭಾರತಿ ವಾಲಿ ಅವರನ್ನು ಆಯ್ಕೆಮಾಡಲಾಯಿತು.
ಸುವರ್ಣಾ ಹಲಗಣಿ, ಗೀತಾ ನಾಯಕ, ಶೋಭಾ ಕಬಾಡೆ, ದಾನಮ್ಮಾ ಗುಗ್ಗರಿ, ಸರಸ್ವತಿ ಮಠ, ವಲಯವಾರು ಜಿಲ್ಲಾದ ಎಲ್ಲ ಅಂಗನವಾಡಿ ನೌಕರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.