ರಾಜ್ಯೋತ್ಸವ: ರಕ್ತದಾನ ಶಿಬಿರ

ಚಿಂಚೋಳಿ,ನ.2- ತಾಲೂಕಿನ ಕಲ್ಲೂರ್ ರೋಡ್ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.
ಶ್ರೀ ವೀರಭದ್ರಶ್ವರ ಸೇವಾ ಸಮಿತಿ ಕಲ್ಲೂರ್ ರೋಡ್ ಅವರ ಆಶ್ರಯದಲ್ಲಿ ಗ್ರಾಮದ ವೀರಭದ್ರಶ್ವರ ದೇವಸ್ಥಾನದಲ್ಲಿ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾದರು. ರಕ್ತದಾನದ ಬಗ್ಗೆ ಜನಗಳಿಗೆ ಅರಿವು ಮೂಡಿಸಲು ಖುದ್ದಾಗಿ ಜಡಿ ಬೀರಪ್ಪ ಪೂಜಾರಿ ಹಾಗೂ ಅವರ ಧರ್ಮಪತ್ನಿ ಜಡಿ ಸೌಮ್ಯ ಪೂಜಾರಿ ಅವರು ರಕ್ತದಾನಕ್ಕೆ ಮುಂದಾದರು 31 ಯೂನಿಟ್ಸ್ ನ ರಕ್ತ ಶೇಖರಣೆ ಮಾಡಲಾಯಿತು ಎಂದು ಜಡಿ ಬೀರಪ್ಪ ಪೂಜಾರಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಮಿರಿಯಾಣ ಪ್ರಾಥಮಿಕ ಕೇಂದ್ರದ ಸಿಬಂದಿಗಳಿ,ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ತರು ಭಾಗಿಯಾಗಿದ್ದರು