ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತಡಾ.ವೇದವ್ಯಾಸರಿಗೆ ಅಭಿನಂದನೆ

ಧಾರವಾಡ : ತಾಲೂಕಿನ ಹೆಬ್ಬಳ್ಳಿ ಹಾಗೂ ಸುತ್ತಲಿನ ಹಳ್ಳಿಗಾಡಿನ ರೈತಾಪಿ ಜನರ ಆರೋಗ್ಯ ಕಾಪಾಡುವಲ್ಲಿ ಸುಮಾರು 40 ವರ್ಷಗಳಿಂದ ನಿರಂತರ ಶ್ರಮಿಸಿರುವ ‘ಬಡವರ ವೈದ್ಯ’ ಎಂದೇ ಪ್ರಸಿದ್ಧರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ವೇದವ್ಯಾಸ ದೇಶಪಾಂಡೆ ಅವರನ್ನು ಅಧ್ಯಾಪಕ ಶಿವಾನಂದ ಹೂಗಾರ, ಡಾ.ಡಿ.ಆರ್.ರೇವಣಕರ, ಎಸ್.ಎಂ.ದೇಸಾಯಿ, ಎ.ಎಸ್. ಬಳಿಗೇರ ಇತರರು ಅಭಿನಂದಿಸಿದ್ದಾರೆ.
ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ತಮ್ಮದೇ ಆದ ವೈದ್ಯಕೀಯ ಚಿಂತನೆಯ ಸುಲಭ ಜನಪರ ಆರೋಗ್ಯ ಪಾಠಕ್ರಮಗಳನ್ನು ರೂಢಿಸಿ ಗ್ರಾಮೀಣ ಜನಮನಗಳ ಜೊತೆಗೆ ಬೆರೆತು ತಮ್ಮ ವೈದ್ಯಕೀಯ ವೃತ್ತಿ ನಿರ್ವಹಿಸಿರುವುದು ಸದಾ ಸ್ಮರಣೀಯವಾಗಿದೆ. ಕೇವಲ ಹಣಕ್ಕಾಗಿ ವೃತ್ತಿ ಮಾಡದೇ, ಹಲವಾರು ಸಂಘಟನೆಗಳ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಭಿನ್ನ ನೆಲೆಯ ಹಲವಾರು ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳನ್ನೂ ಸಂಘಟಿಸಿ ಜನತೆ ರೋಗ ಮುಕ್ತಗೊಳ್ಳುವಂತೆ ಮಾಡುವಲ್ಲಿ ಡಾ.ದೇಶಪಾಂಡೆ ಯಶಸ್ವಿಯಾಗಿದ್ದಾರೆ ಎಂದವರು ಹೇಳಿದ್ದಾರೆ.
ವೈದ್ಯಕೀಯ ಸೇವೆಗಳು ಅತ್ಯಂತ ಸುಲಭವಾಗಿ ದೊರಕಬೇಕು. ಬಡವರು ತಮ್ಮ ಆರೋಗ್ಯ ರಕ್ಷಣೆಗಾಗಿ ಸಾಲದ ಬಾಧೆಗೆ ಒಳಗಾಗಬಾರದು ಎಂಬ ಕಾಳಜಿಯನ್ನು ಹೊಂದಿರುವ ಡಾ.ವೇದವ್ಯಾಸ ಅವರ 40 ವರ್ಷಗಳ ಹಳ್ಳಿಗಾಡಿನ ವೈದ್ಯಕೀಯ ಸೇವೆಯನ್ನು ಸರಕಾರ ಗುರುತಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.