ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಗೆ ಸನ್ಮಾನ

 

ಜಗಳೂರು.ನ.೬; ಕನ್ನಡ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತೆ ತಾಲೂಕಿನ ಜಗಳೂರು ಗೊಲ್ಲರಹಟ್ಟಿ ಸುಲ್ತಾನ್ ಬಿ ಅವರಿಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್. ಕಾಂಗ್ರೆಸ್ ಮುಖಂಡ  ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಸೇರಿದಂತೆ ಮುಖಂಡರುಗಳು ಶಾಲು ಹಣ್ಣಿನ ಬುಟ್ಟಿಹೂವಿನ ಹಾರ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ಬರದ ನಾಡಿನಲ್ಲಿ ದಶಕಗಳ ಕಾಲ ನಾಟಿ ವೈದ್ಯೆಯಾಗಿ,ಸೂಲಗಿತ್ತಿ ಕಾರ್ಯದಲ್ಲಿ ತನ್ನದೇ ಛಾಪು ಮೂಡಿಸಿ ನೆರೆಹೊರೆಯ ತಾಲೂಕುಗಳಲ್ಲಿ ಚಿರಪರಿಚಿತರಾಗಿರುವ ಸುಲ್ತಾನ್ ಬಿ ಅವರನ್ನು ಸಮಾಜ ಸೇವೆಯನ್ನು ಗುರುತಿಸಿ ನೈಜ ಬಡ ಪ್ರತಿಭೆಗೆ ರಾಜ್ಯ ಸರ್ಕಾರ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಿರುವುದು ಶ್ಲಾಘನೀಯ ಜಗಳೂರು ತಾಲೂಕಿಗೆ ಕೀರ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ,ಕೈಯಲ್ಲಿ ಹಾವುಗಳನ್ನು ಹಿಡಿಯುವ ಕಲೆಯನ್ನು ಮೈಗೂಡಿಸಿಕೊಂಡು ಜನರನ್ನು ಅಪಾಯದಿಂದ ಕಾಪಾಡುವುದನ್ನು ನಾವು ಸಮೀಪದಿಂದ ಕಂಡಿದ್ದೆವು ಅಲ್ಲದೆ
ಗ್ರಾಮೀಣ ಭಾಗದಲ್ಲಿ ಯಾವುದೇ ಲ್ಯಾಬ್, ಔಷಧಿಗಳು ಲಭ್ಯವಿರದ ಕಾಲಘಟ್ಟದಲ್ಲಿ  ಸಾವಿರಾರು ಸಂಖ್ಯೆಯ  ಗರ್ಭಿಣಿಯರಿಗೆ ತೊಂದರೆಯಾಗದಂತೆ ಸೂಲಗಿತ್ತಿ ಕಾರ್ಯ ನಿರ್ವಹಿಸಿರುವ ಸುಲ್ತಾನ್ ಬಿ ಅವರ ಸೇವೆಗೆ ಸರ್ಕಾರ ನೀಡಿದ ಮನ್ನಣೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪೇಸ್ವಾಮಿ ಗೌಡ,ಮಾಳಮ್ಮನಹಳ್ಳಿ ವೆಂಕಟೇಶ್,ಸಿತಿಪ್ಪೇಸ್ವಾಮಿ,ಬಿ.ಲೊಕೇಶ್,ಓಮಣ್ಣ, ಲಿಂಗಣ್ಣನಹಳ್ಳಿ ಅಜ್ಜಯ್ಯ,ಶಿವನಗೌಡ, ತಿಮ್ಮಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ,ಅನಿಲ್ ಮದಕರಿ ,ವಕೀಲನಾಗೇಶ್ ,ಪಿಂಜಾರ್ ಸಮಾಜದ ಆದಂ ಅಲಿ, ಭಾಷಾ,ಹಜರತ್ ಅಲಿ, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಸೇರಿದಂತೆ ಇದ್ದರು.