ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದನಾಗೆ ಸನ್ಮಾನ

ಬಳ್ಳಾರಿ, ನ. 9: ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದೆ ಜಿ.ವಂದನಾ ಅವರನ್ನು ತಾಲೂಕಿನ ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಹಾಗೂ ಪಲ್ಲವ ಪ್ರಕಾಶನ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು.
ಹೊಸಪೇಟೆಯ ಕುವೆಂಪು ಬಡಾವಣೆಯಲ್ಲಿ ಅವರ ನಿವಾಸದಲ್ಲಿ ವಂದನಾ ಅವರಿಗೆ ನಿನ್ನೆ ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ಪಲ್ಲವ ಪ್ರಕಾಶನದ ಡಾ. ಕೆ.ವೆಂಕಟೇಶ್ ಮೊದಲಾದವರು ಶಾಲು ಹೊದಿಸಿ, ಪುಸ್ತಕಗಳನ್ನು ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಉಮಾ ಪುರುಷೋತ್ತಮ, ವಂದನಾ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.