ರಾಜ್ಯೋತ್ಸವ ಪ್ರಶಸ್ತಿ : ಜಯಲಕ್ಷ್ಮೀ ಮಂಗಳ ಮೂರ್ತಿರಿಗೆ ಸನ್ಮಾನ

ರಾಯಚೂರು.ನ.೦೬- ಹರಿದಾಸ ಸಾಹಿತ್ಯ ಪರಂಪರೆಯ ಅಧ್ಯಯನದಲ್ಲಿ ತೊಡಗಿ, ಅನೇಕ ವಿಷಯಗಳ ಬಗ್ಗೆ ಸಾಹಿತ್ಯ ರಚಿಸಿದ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಗೌರವಿಸಿದರು.
ಜಯಲಕ್ಷ್ಮೀ ಮಂಗಳಮೂರ್ತಿ ಅವರ ನಿವಾಸಕ್ಕೆ ತೆರಳಿ, ಅವರಿಗೆ ಗೌರವ ಪೂರ್ವಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ರವೀಂದ್ರ ಜಲ್ದಾರ್, ನಾಗರಾಜ, ಶಶಿರಾಜ, ಮಹೇಂದ್ರ ರೆಡ್ಡಿ, ಭೀಮಣ್ಣ ಮಂಚಾಲಿ, ಮೌನೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.