ರಾಜ್ಯೋತ್ಸವ ಪ್ರಶಸ್ತಿಗೆ ಯುವ ಅಂಕಣಕಾರ ಸೂರ್ಯಕಾಂತ ಆಯ್ಕೆ

ಔರಾದ : ನ.12:ವಿಶ್ವ ಕನ್ನಡಿಗರ ಸ0ಸ್ಥೆ(ರಿ) ವತಿಯಿಂದ ನೀಡುವ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ತಾಲೂಕಿನ ಪತ್ರಕರ್ತ ಯುವ ಅಂಕಣಕಾರ ಸೂರ್ಯಕಾಂತ ದೇವಗೊಂಡ ಅವರು ಆಯ್ಕೆ ಯಾಗಿದ್ದಾರೆ.

ಸೂರ್ಯಕಾಂತ ದೇವಗೊಂಡ ಅವರು ಪತ್ರಿಕಾ ರಂಗದಲ್ಲಿ ಸಾಮಾಜಿಕ ಚಿಂತನೆ ಒಳಗೊಂಡ ಅನೇಕ ಅಂಕಗಳನ್ನು ಬರೆಯುವ ಮೂಲಕ ಜನಮನ ಗೆದ್ದಿದ್ದಾರೆ. ಅನೇಕ ಸಾಮಾಜಿಕ ಸಮಸ್ಯೆಗಳನ್ನು, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿಂಬಿಸುವ ವರದಿ ಪತ್ರಿಕೆಯಲ್ಲಿ ಬಿತ್ತರಿಸುವ ಮೂಲಕ ಪತ್ರಿಕಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೀದರನ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ನವೆಂಬರ 27ರಂದು ನಡೆಯುವ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿದಕ್ಕೆ ಔರಾದ ತಾಲೂಕು ಪತ್ರಿಕಾ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.