ರಾಜ್ಯೋತ್ಸವ ಪುರಸ್ಕøತ `ಕೃಷಿಕ’ ಧಂಗಾಪುರ ಸಂದರ್ಶನ ಡಿಡಿಯಲ್ಲಿ ಪ್ರಸಾರ

ಕಲಬುರಗಿ :ನ.20: ಪ್ರಸಕ್ತ ಸಾಲಿನ ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೃಷಿತಜ್ಞ ಡಾ.ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರನ್ನು ಸಂದರ್ಶನ ಮಾಡಿದ ವಿಶೇಷ ಕಾರ್ಯಕ್ರಮವು ಶನಿವಾರ ಡಿಡಿಯಲ್ಲಿ ಪ್ರಸಾರವಾಗಲಿದೆ.

ಕಲಬುರಗಿ ದೂರದರ್ಶನ ಕೇಂದ್ರ ನಿರ್ಮಾಣ ಮಾಡಿದ ಈ ಸಂದರ್ಶನವು, ನ.21 ರಂದು ಮಧ್ಯಾಹ್ನ 2.30 ಕ್ಕೆ ಚಂದನ ಬೆಂಗಳೂರು ಕೇಂದ್ರದಿಂದ ಪ್ರಸಾರಗೊಳ್ಳಲಿದೆ. ಹಿರಿಯ ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಈ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ. ಗುಲಬರ್ಗಾ ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಎನ್. ಪಂಕಜಾ ಅವರು ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿರುವ ಸುಮಾರು 50 ವರ್ಷದ ಅನುಭವವನ್ನು ಡಾ.ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರು ಹಂಚಿಕೊಂಡಿದ್ದಾರೆ.