ರಾಜ್ಯೋತ್ಸವ ಪುರಸ್ಕೃತರಿಗೆ ದರ್ಶನಾಪುರರಿಂದ ಸನ್ಮಾನ

ಶಹಾಪುರ:ನ.19:ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ಕವನ ಸಂಕಲನ, ಬಾನುಲಿ ನಾಟಕ, ಜೈನ ಜಾನಪದ ಹಾಡುಗಳು ವಿವಿದ ಸಾಹಿತ್ಯ ಪ್ರಕಾರಗಳನ್ನು ರಚನೆ ಮಾಡಿದ ನಮ್ಮ ಭಾಗದ ಹೆಮ್ಮೆಯ ಸಾಹಿತಿಗೆ ಸನ್ಮಾನ ಮಾಡುವುದು ನಮ್ಮ ಮಹಾತ್ಕಾರ್ಯವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಶಾಸಕರ ಕಚೇರಿಯಲ್ಲಿ ರಾಜ್ಯೊತ್ಸವ ಪ್ರಶಸ್ತಿ ಪುರಸೃತರಾದ ಸಾಹಿತಿ ಡಿ.ಎನ್.ಅಕ್ಕಿಯವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಹಿಂದೆ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಮಹಾರಾಷ್ಟ್ರ ಆಚಾಂiÀರ್i ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೆರಿಸಿಕೋಂಡು ನಮ್ಮ ಭಾಗದ ಹೆಸರನ್ನು ಮುನ್ನಡೆಗೆ ತರುವಲ್ಲಿ ಶ್ರಮಿಸಿದ್ದಾರೆ ಈ ಪ್ರಶಸ್ತಿಯು ಅವರಿಗೆ ಸಂದ ಗೌರವವಾಗಿದೆ ಎಂದು ಅವರು ನುಡಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಸಾಹಿತಿ ಅಕ್ಕಿಯವರು ನಾವು ಪಟ್ಟ ಕಷ್ಟಗಳ ಮತ್ತು ಪರಿಶ್ರಮದ ಫಲವಾದ ಪ್ರಶಸ್ತಿಯ ಜೊತೆಗೆ ಶಾಸಕರ ಕಾಳಜಿವು ಮನಮುಟ್ಟುವಂತದ್ದು ಎಂದರು.

ಇದೆ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಮರಿಗೌಡ ಹುಲಕಲ್, ಕಾಂಗ್ರೇಸ್ ಮುಖಂಡರಾದ ವಿಶ್ವನಾಥರೆಡ್ಡಿ ದರ್ಶನಾಪುರ, ಬಸವರಾಜ ಹೀರೆಮಠ, ಪುರಸಭೆ ಮಾಜಿ ಅಧ್ಯಕ್ಷರಾದ ಸಣ್ಣ ನಿಂಗಣ್ಣ ನಾಯ್ಕೊಡಿ, ಕಾಶಿ ಮಸಾಬ್ ಕಾಲೆಬುಡ್ಡಿ, ರೇವಣಸಿದ್ದಪ್ಪ ಕಲಬುರ್ಗಿ, ಘೇವರಚಂದ ಜೈನ್, ಬಸವರಾಜಪ್ಪಗೌಡ ತಂಗಡಗಿ, ಮಾಲಿಕರೆಡ್ಡಿ ದೇವಣಗಾವ್, ಶಿವಕುಮಾರ ಬಿಲ್ಲಂ ಕೋಂಡಿ, ಮಲ್ಲಣಗೌಡ ಪಾಟೀಲ್, ಡಾ. ಬಸವರಾಜ ಇಜೇರಿ, ನಗರಸಭೆ ಸದಸ್ಯರಾದ ಶಿವಕುಮಾರ ತಳವಾರ್. ಮಹಾದೇವಯ್ಯ ಸ್ವಾಮಿ, ಮಲ್ಲಪ್ಪ ಗೋಗಿ, ಸೈಯಾದ್ ಕಾಲಿದ್, ಸೇರಿದಂತೆ ಹಲವರು ಭಾಗಿಯಾಗಿದ್ದರು.