ರಾಜ್ಯೋತ್ಸವ ನೆನಪಿಗಾಗಿ 6ಹಳ್ಳಿಗಳಲ್ಲಿ ಕಿಟ್ ವಿತರಣೆಗೆ ಚಾಲನೆ

ಸೇಡಂ,ನ,13: ತಾಲೂಕಿನ ಬಟಗೇರಾ ಬಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ನಾರಾಯಣಗೌಡ ಬಣದ ವತಿಯಿಂದ 6 ಹಳ್ಳಿಗಳಲ್ಲಿ ಕಿಟ್ಟ ವಿತರಣೆಗೆ ಮೊದಲನೇದಾಗಿ ಬಟಗೇರಾ ಬಿ ಗ್ರಾಮದಲ್ಲಿ ಕರವೇ ಅಧ್ಯಕ್ಷರಾದ ಅಂಬರೀಶ್ ಎಸ್ ಊಡಗಿರವರು ಚಾಲನೆ ನೀಡಿದರು.ಕಿಟ್ ವಿತರಿಸಿ ಮಾತನಾಡಿದ ಅವರು ತಾಲೂಕಿನಾದ್ಯಂತ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಕರವೇಯ ನಾರಾಯಣಗೌಡ ಬಣದ ವತಿಯಿಂದ ನಡೆಸಿಕೊಂಡು ಬರುತ್ತಿದ್ದೇವೆ.ಆದರೆ ಈ ವರ್ಷ ಮಹಾಮಾರಿ ಕೋರೋನಾ, ಹಾಗೂ ಪ್ರವಾಹದಿಂದ ಸಂಪೂರ್ಣ ನಲಗಿ ಹೋಗಿರುವ ತಾಲೂಕು ಹಾನಿಗೊಳಗಾದ ಕಡುಬಡವರಿಗೆ ಆಹಾರ ಧಾನ್ಯ ಮತ್ತು ಜಮಖಾನೆ ವಿತರಿಸುವ ಮುಖಾಂತರ 65ನೇ ಕರ್ನಾಟಕ ರಾಜ್ಯೋತ್ಸವ ನೆನಪಿಗಾಗಿ , ಬಟಗೇರಾ ಬಿ, ಮಳಖೇಡ, ಬಿಜನಳ್ಳಿ, ಸಟಪಟ್ನಹಳ್ಳಿ, ಯರಗೋಳ, ಇಮಡಾಪುರ ಈ ಗ್ರಾಮಗಳಲ್ಲಿ ಕಿಟ್ಟ ವಿತರಣೆ ಮಾಡುತ್ತಿದ್ದೇವೆ ಎಂದರು.ಈ ಕಿಟ್ ವಿತರಿಸುವ ಸಂದರ್ಭದಲ್ಲಿ ಕರವೇ ತಾಲೂಕಾ ಪ್ರಧಾನ ಕಾರ್ಯದರ್ಶಿ ಅನಿಲ್ ಹಳಿಮನಿ, ಕೈಲಾಸಲಿಂಗ ಪಾಟೀಲ್, ಶ್ಯಾಮ, ಬಡಿಗೇರ ಬಿ ಕರವೇಯ ಗ್ರಾಮ ಘಟಕದ ಅಧ್ಯಕ್ಷರಾದ ರವಿ ಚಿನ್ನ ರಾಥೋಡ್, ಮತ್ತು ಮಲ್ಲಮ್ಮ ಜಮಾದಾರ್, ಸಂಘಟನೆಯ ಸದಸ್ಯರು ಹಾಗೂ ಊರಿನ ಹಿರಿಯರು ಕಿರಿಯರು ಮಹಿಳೆಯರು ಮುಂತಾದವರು ಇದ್ದರು. ತಾಲೂಕಿನ ವಿವಿಧ ಸರ್ಕಾರಿ ಕಚೇರಿಯ ಬ್ಯಾಂಕುಗಳಲ್ಲಿ ಹಿಂದಿ ತೆಲುಗು ಭಾಷೆಯಲ್ಲಿ ಮಾತನಾಡುವ ಮ್ಯಾನೇಜರ್ ಮತ್ತು ಸಿಬ್ಬಂದಿವರ್ಗದವರಿಗೆ ಆದಷ್ಟು ಮಟ್ಟಿಗೆ ಕನ್ನಡ ಕಲಿಸುವಂತಹ ವ್ಯವಸ್ಥೆ ಮುಂದಾಗಿದ್ದೇವೆ.ಬ್ಯಾಂಕ್ ನ ಎಲ್ಲಾ ಕಚೇರಿಗಳಿಗೆ ತೆರಳಿ ಕನ್ನಡ ಬಾರದ ಮ್ಯಾನೇಜರ್ ಸಿಬ್ಬಂದಿವರ್ಗದವರಿಗೆ ಕನ್ನಡ ಅಂಕಲಿಪ್ ಕೊಡಲು ಮುಂದಾಗಿದೆವೆ.ಹಳ್ಳಿಯ ರೈತರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆ ಬರುವುದಿಲ್ಲ.ಅಂತವರಿಗೆ ಇಲ್ಲಿನ ಬ್ಯಾಂಕ್ ಸಿಬ್ಬಂದಿ ವರ್ಗದವರು ಸರಿಯಾದ ರೆಸ್ಪಾನ್ಸ್ ನೀಡುತ್ತಿಲ್ಲ ಎಂಬುದು ರೈತನ ಗೋಳು. ಆದ್ದರಿಂದ ಇಲ್ಲಿನ ಗ್ರಾಹಕರಿಗೆ ಕನ್ನಡದಲ್ಲಿ ವ್ಯವಹರಿಸದೆ ಇದ್ದರೆ ಉಗ್ರ ಹೋರಾಟ ಮುಖಾಂತರ ತಾಲೂಕಿನಿಂದ ಹೊರಹಾಕುವುದಕ್ಕೆ ಮುಂದಾಗಬೇಕಾಗುತ್ತದೆ. ಅಂಬರೀಶ್ ಎಸ್ ಊಡಗಿ ಕರವೇ ತಾಲೂಕಾ ಅಧ್ಯಕ್ಷರು
ಸೇಡಂ