ರಾಜ್ಯೋತ್ಸವ ನಿಮಿತ್ಯ ನಾಟಕೋತ್ಸವ: ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

ಕಲಬುರಗಿ,ನ.16: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಅಳ್ಳೊಳ್ಳಿಯ ಹಂಪಯ್ಯ ಸ್ವಾಮಿಗಳ ಸ್ಮರಣಾರ್ಥ ನವೆಂಬರ್ 18ರಂದು ಬೆಳಿಗ್ಗೆ 11.45 ಗಂಟೆಗೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿಭೆಗೊಂದು ರಂಗ ವೇದಿಕೆ-2023ರ ವಿನೂತನ ಕಾರ್ಯಕ್ರಮದಡಿ ರಂಗ ಸುವರ್ಣ- ರಂಗ ಸಿರಿ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗಮಿತ್ರ ನಾಟ್ಯ ಸಂಘದ ರಮೇಶ್ ತಿಪ್ಪನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನಿಧ್ಯವನ್ನು ಶಹಾಪುರದ ಮಹಲ್ ರೋಜಾದ ಮಲ್ಲಿಕಾರ್ಜುನ್ ಮುತ್ಯಾ, ನಂದೂರ್ (ಬಿ)ಯ ಗುರಪ್ಪ ಎನ್. ಪಾಟೀಲ್, ಅಧ್ಯಕ್ಷತೆಯನ್ನು ಮಹಾಪೌರ ವಿಶಾಲ್ ದರ್ಗಿ ಅವರು ವಹಿಸುವರು. ನಾಟಕವನ್ನು ಸಂಸದ ಡಾ. ಉಮೇಶ್ ಜಾಧವ್ ಅವರು ಉದ್ಘಾಟಿಸುವರು. ಪ್ರತಿಭೆಗೊಂದು ರಂಗ ವೇದಿಕೆ ಉದ್ಘಾಟನೆಯನ್ನು ಶಾಸಕರಾದ ಬಸವರಾಜ್ ಮತ್ತಿಮೂಡ್ ಮತ್ತು ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸುವರು ಎಂದರು.
ರಂಗಭೂಮಿ ಪೂಜೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಮುಖಂಡರಾದ ಸಂತೋಷ್ ಗಡಂತಿ, ವಿಶ್ವನಾಥ್ ಪಾಟೀಲ್, ಶಿವಯೋಗಿ ರುಸ್ತಂಪೂರ್, ಲಕ್ಷ್ಮೀ ನರಸಿಂಹರೆಡ್ಡಿ, ಸತೀಶ್ ರೆಡ್ಡಿ, ಪುಟ್ಟರಾಜ್ ಗವಾಯಿಗಳ ಭಾವಚಿತ್ರದ ಪೂಜೆಯನ್ನು ಅಶೋಕ್ ಚವ್ಹಾಣ್, ಶ್ರೀಹರಿ ಕಾಟಾಪೂರ್, ಜಗದೀಶ್ ಮರಪಳ್ಳಿ, ರಾಮರೆಡ್ಡಿ ಪೋಲಿಸ್ ಪಾಟೀಲ್, ಅಮರ್ ಲೋಡನೂರ್, ಭೀಮಶೆಟ್ಟಿ ಮುರುಡಾ, ನಟರಾಜನ ಪೂಜೆಯನ್ನು ಗೌತಮ್ ವ್ಹಿ. ಪಾಟೀಲ್, ಚಂದ್ರಶೇಖರ್ ಗುರ್ತೇದಾರ್, ರಾಮರಾವ್ ಪಾಟೀಲ್, ಜಗದೀಶಸಿಂಗ್ ಠಾಕೂರ್, ಶ್ರೀಮಂತ್ ಕಟ್ಟಿಮನಿ, ಕೆ.ಎಂ. ಬಾರಿ, ಶರಣಯ್ಯಸ್ವಾಮಿ ಮೋಘ, ಶರಣು ಚಂದಾ, ಹಂಪಯ್ಯ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆಯನ್ನು ಶಾಂತಕುಮಾರ್ ಪಾಟೀಲ್ ನಂದೂರ್, ಪ್ರೇಮಸಿಂಗ್ ಜಾಧವ್, ಆರ್. ಗಣಪತರಾವ್, ಶ್ರೀಮಂತರಾವ್ ಮೋತಕಪಳ್ಳಿ, ರಾಜಶೇಖರ್ ಗುಡಬಾ ಹಾಗೂ ಸಿರಾಜ್ ಪಟೇಲ್ ಭಾವಚಿತ್ರಕ್ಕೆ ಗಣ್ಯರು ಪೂಜೆ ನೆರವೇರಿಸುವರು ಎಂದು ಅವರು ವಿವರಿಸಿದರು.
ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜ್ಯೋತಿಯನ್ನೂ ಸಹ ಗಣ್ಯರು ಬೆಳಗಿಸುವರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಬಿರಾದಾರ್ ಹೂಡದಳ್ಳಿ, ಬಸವರಾಜ್ ದೇಶಮುಖ್ ಗಾರಂಪಳ್ಳಿ, ಸಂಗಣ್ಣ ಅಲ್ದಿ ಮಲಕೂಡ್, ವಿಶ್ವನಾಥ್ ವಿಶ್ವಕರ್ಮ ಹಂಗನಳ್ಳಿ ಸೇಡಂ, ಮನೋಹರ್ ಹತರ್ಗಾ ಉಡಚಣ್, ಶಿವಶರಣ್ ಬುರಲಿ, ಹಣಮಂತರಾವ್ ಮಹಾರಾಜ್ ಕೊಡದೂರ್ ಕಾಳಗಿ, ಗಿರಿವೆಂಕಟೇಶ್ ದೇವರಮನಿ ರೇವಗ್ಗಿ, ಮಹಾಂತೇಶ್ ಕಂಠಿಕೋರೆ ಸಾಲೇಗಾಂವ್, ಬಸವರಾಜ್ ಹಂದಗಿ ಆಂದೋಲಾ, ಲಕ್ಷ್ಮೀಕಾಂತ್ ಮಳಬಾ ನಾಲವಾರ್, ವೀರೇಶ್ ಪಾಟೀಲ್ ಇಟಗಿ, ದತ್ತಾತ್ರೇಯ್ ಬುಕ್ಕಾ ಹಲಕಟ್ಟಿ, ಶಿವಾನಂದ್ ಶಂಕರಯ್ಯ ಕಪೂರ್ ಸುಲೇಪೇಟ್, ವೆಂಕಟೇಶ್ ತೆಲ್ಲಾಪಳ್ಳಿ ಚಿಮ್ಮನಚೋಡ್, ಶೇಖ್ ಭಕ್ತಿಯಾರ್ ಜಾಗೀರದಾರ್ ಐನೋಳ್ಳಿ, ಮಲ್ಲಯ್ಯಸ್ವಾಮಿ ಹರಸಗುಂಡಗಿ, ಮಲ್ಲಿಕಾರ್ಜುನ್ ತಳವಾರ್ ಗಂಜಗೇರಾ ಅವರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನವೆಂಬರ್ 18ರಂದು ತಾಳಿ ಹರಿಯಲಿಲ್ಲ, ನವೆಂಬರ್ 19ರಂದು ಶೀಲ ಉಳಿಯಲಿಲ್ಲ, ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಮರಾವ್ ಕೊರವಿ, ಮೋಹನ್ ನಿರ್ಮಲಕರ್, ಭೀಮಾಶಂಕರ್ ಪಾಟೀಲ್, ಲಕ್ಷ್ಮಣ್ ಅವಂಟಿ, ಅಬ್ದುಲ್ ಜಮಾದಾರ್, ವಿಶ್ವನಾಥ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.