ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಸರ್ದಾರ್

ಮಧುಗಿರಿ, ನ. ೧೨- ಕನ್ನಡ ರಾಜ್ಯೋತ್ಸವ ಕೇವಲ ಉತ್ಸವವಾಗದೆ ನಿತ್ಯೋತ್ಸವಾಗಬೇಕು ಎಂದು ಸಿಪಿಐ ಎಂ. ಸರ್ದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ರಾಘವೇಂದ್ರ ಸ್ವಾಮಿ ಆಟೋ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಂಕರ್‍ನಾಗ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಜನ್ಮ ನೀಡಿದ ತಾಯಿಯನ್ನು ಪ್ರೀತಿಸುವಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು. ನಮ್ಮ ಧರ್ಮ ಹಾಗೂ ಭಾಷೆಯನ್ನು ಪ್ರೀತಿಸುವುದರ ಜತೆಗೆ ಅನ್ಯ ಭಾಷೆ ಹಾಗೂ ಧರ್ಮವನ್ನು ಗೌರವಿಸಬೇಕು ಎಂದರು.
ಆಟೋ ಚಾಲಕರು ತಮ್ಮ ವಾಹನಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಸರಿಯಾದ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸವಿನೆನಪಿಗಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಆರ್‍ಟಿಓ ನಾಗರಾಜು, ಮುಖಂಡರಾದ ರವಿಕಾಂತ್, ಕಂಠಿ ಮಂಜುನಾಥ್, ಗ್ರಾಮ ಲೆಕ್ಕಿಗ ಶಿವರಾಮಯ್ಯ, ಆಟೋ ಚಾಲಕರಾದ ಆಟೋಗೌಡ, ದಾದಾಪೀರ್, ಹುಸ್ಮಾನ್, ಸತ್ಯಪ್ಪ, ಕಾಂತರಾಜು, ರಮೇಶ್, ರಾಮಣ್ಣ, ರಘು, ರಂಗನಾಥ್, ಸಲ್ಮಾನ್, ನಾಗರಾಜು, ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.