ರಾಜ್ಯೋತ್ಸವ ಕಾರ್ಯಕ್ರಮ

ಧಾರವಾಡ,ನ.1: ಕನ್ನಡ ಭಾಷೆ ಎಲ್ಲರಿಗೂ ಸ್ಪೂರ್ತಿದಾಯಕ ಅದರಲ್ಲೂ ಕನ್ನಡದ ಕಂಪು ಇಂದು ಜಗತ್ತಿಗೆ ಪಸರಿಸಿದೆ ಎಂದು ಶ್ರೀನಿವಾಸ್ ವಾಡಪ್ಪಿ ತಿಳಿಸಿದರು.
ನಗರದ ಎಸ್ ಡಿ ಎಂ ಇಂಜನೀಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹೆಮ್ಮೆಯ ಸಂಕೇತ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕನ್ನಡ ಭಾಷೆಯ ವೈಭವದ ಸಂಪ್ರದಾಯಗಳು ಮತ್ತು ಅದರ ವಿವಿಧ ಮುಖಗಳ ಬಗ್ಗೆ ಮಾತನಾಡಿದರು. ರಾಜ್ಯದ ಏಕೀಕರಣಕ್ಕೆ ವಿವಿಧ ನಾಯಕರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಗೋಪಿನಾಥ, ಜೀವಂಧರ ಕುಮಾರ, ಮಹಾದೇವ ದೊಡ್ಡಮನಿ, ವಿ ಕೆ ಪಾರ್ವತಿ ಸೇರಿದಂತೆ ಹಲವರು ಇದ್ದರು.