ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕನ್ನು ಸನ್ಮಾನಿಸಿದ ವೀರ ಕನ್ನಡಿಗೆ ಸೇನೆ

ಕಲಬುರಗಿ,ಡಿ.19- ಕೊರೊನಾ ವಾರಿಯರ್ಸಗಳ ಸೇವೆಯನ್ನು ಗುರುತಿಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಅವರನ್ನು ಕನ್ನಡ ನಾಡಿನ ಉತ್ಸವದಲ್ಲಿ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಕೆಲಸಕ್ಕೆ ಪ್ರೊತ್ಸವ ನೀಡುತ್ತಿರುವ ಕನ್ನಡ ಪರ ಸಂಘಟನೆಗಳ ಸೇವೆ ಸ್ಮರಣೀಯ ಎಂದು ಯುವ ಉದ್ಯಮಿ ಶರಣು ಪಪ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕಲಾ ಮಂಡಳ ಸಭಾಂಗಣದಲ್ಲಿ ವೀರ ಕನ್ನಡಿಗರ ಸೇನೆ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ದಿ ಮತ್ತು ಕಲ್ಯಾಣಕ್ಕಾಗಿ ಇಲ್ಲಿನ ಕನ್ನಡ ಪರ ಸಂಘಟನೆಗಳು ಐಕ್ಯತೆಯಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಖ್ಯಾತ ಉದ್ಯಮಿ ಮತ್ತು ಕಾಂಗ್ರೆಸ ಮುಖಂಡ ಅರುಣಕುಮಾರ ಪಾಟೀಲ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಪೊಲೀಸ ಅಧಿಕಾರಿಗಳು, ಬೀದಿ ವ್ಯಾಪಾರಿಗಳು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯತ್ಸವರನ್ನು ಸನ್ಮಾನಿಸ ಗೌರವಿಸಲಾಯಿತು.
ವೀರ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಪಾಳಾ ಮಠದ ಪೂಜ್ಯ ಗುರುಮೂರ್ತಿ ಶಿವಾಚಾರ್ಯರು, ದಂಡಗುಂಡ ಮಠದ ಪೂಜ್ಯ ಸಂಗಮನಾಥ ದೇವರು, ಕುಮಸಿವಾಡಿಯ ಪೂಜ್ಯ ಚನ್ನವೀರ ಮಹಾಸ್ವಾಮಿಗಳು, ಖಾಜಾ ಸಾಬ ಮುತ್ತ್ಯ, ಪಾಪುಲಾಲ್ ಮುತ್ಯ ಸಾನಿಧ್ಯವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಜಗದೀಶ ಚೌರಾ, ವಿಠಲ ಕುಸಾಳೆ, ಹಣಮಂತ ಇಂಚೇಳಿ, ಮಲ್ಲಿಕಾರ್ಜುನ ಮಠ, ರಜನಿಕಾಂತ ಕೋಣಿನ, ಮಂಜುನಾಥ ಬುಗಶೆಟ್ಟಿ, ಸುಧೀರ ಕೊರವಿ, ನಾಗಯ್ಯ ಸ್ವಾಮಿ, ಮಹಿಬೂಬ ಮಂಗಲಗಿ, ಶಿವಾನಂದ ಚಿಕ್ಕಾಣಿ, ಶಿವಕುಮಾರ ದೇವರಮನಿ, ಪ್ರಕಾಶ ಪಾಟೀಲ, ಅನೀಲ ತಳವಾರ, ರಿಷಿ ವಾಡೇಕರ, ಹಣಮಂತ ಭಜಂತ್ರಿ, ಸಿದ್ದು ಕಂದಗಲ, ಯಲ್ಲಾಲಿಂಗ ಪಾಳಾ, ಬೇತಾಬ ಉಪಾದ್ಯ, ರಮೇಶ ಪಾಶವಾನ, ಭಾಗಮ್ಮ ಚೌದರಿ, ಮಲ್ಲಿನಾಥ ಭೋವಿ, ಅಕ್ಷಯಕುಮಾರ, ರವಿ ಒಂಟಿ, ಶಿವಾಜಿ ಚವಾಣ ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಕುಮಾರಿ ಆಕಾಂಕ್ಷ ಅವರು ನಾಡುನುಡಿ ಗೀತೆಯ ನೃತ್ಯ ಮಾಡಿದರು. ಅಮೃತ ಪಾಟೀಲ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.