ರಾಜ್ಯೋತ್ಸವ ಕವಿಗೊಷ್ಠಿ

ಕಲಬುರಗಿ,ನ.6: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮಂಗಳವಾರ ಸಂಜೆ 4.30 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಘೋಷವಾಕ್ಯದೊಂದಿಗೆ ವಿಶೇಷ ರಾಜ್ಯೋತ್ಸವ ಕವಿಗೊಷ್ಠಿ ಹಾಗೂ ವಿವಿಧ ಕ್ಷೇತ್ರದ ಪ್ರಮುಖರಿಗೆ ತಾಲೂಕು ಮಟ್ಟದ ಗೌರವ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ತಾಲೂಲು ಕಸಾಪ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಕನ್ನಡ ನೆಲ-ಜಲ ಸಂರಕ್ಷಣೆ ಮಾಡುವ ಧ್ಯೇಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ವೈವಿದ್ಯಮಯ ಮತ್ತು ವರ್ಣಮಯ ಕಾರ್ಯಕ್ರಮಗಳನ್ನು ತಾಲೂಲಿ ಘಟಕವು ಆಯೋಜಿಸುತ್ತಾ ಬರುತ್ತಿದೆ.
ಭಾಷೆ ಉಳಿದಾಗ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ. ಕನ್ನಡ ಭಾಷೆಯು ಸಂಬಂಧ ಬೆಸೆದು ಬದುಕು ಕಟ್ಟಿ ಕೊಡುತ್ತದೆ. ಕನ್ನಡ ಕಟ್ಟುವ ಕೆಲಸ ಈ ರೀತಿಯ ಕಾರ್ಯಕ್ರಮಗಳ ಆಯೋಜಿಸುವ ಮೂಲಕ ಕಸಾಪ ಮಾಡುತ್ತಿದೆ ಎಂದರು.
ಇತಿಹಾಸ ತಜ್ಞೆ ಡಾ. ಇಂದುಮತಿ ಪಾಟೀಲ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ-ಸಾಹಿತಿ ಸುಭಾಷ ಬಣಗಾರ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿಕ್ಷಣ ಇಲಾಖೆಯ ವಸಂತ ಭಂಡಾರಿ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ ಕಲ್ಲೂರ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಶಕುಂತಲಾ ಪಾಟೀಲ ಜಾವಳಿ ಮುಖ್ಯ ಅತಿಥಿಗಳಾಗಿಎಉವರು. ಅನೇಕ ಕವಿಗಳು ತಮ್ಮ ಸ್ವ ರಚಿತ ಕವನ ವಾಚಿಸಲಿದ್ದಾರೆ.
ಗಾಯಕಿ ಈರಮ್ಮಾ ಸ್ವಾಮಿ, ಹಿರಿಯ ಪತ್ರಕರ್ತ ಗುಂಡೂರಾವ ಕಡಣಿ, ಉದ್ಯಮಿ ಸಂಪತಕುಮಾರ ಪಾಟೀಲ, ಚಿತ್ರ ಕಲಾವಿದ ಶಿವಕುಮಾರ ಜಾಕ್ನಳ್ಳಿ, ಸಮಾಜ ಸೇವಕ ಸತೀಶ ಗಾಗಿಲ್ಲ ಅವರನ್ನು ಗೌರವ ಪುರಸ್ಕಾರ ನೀಡಲಾಗುವುದು.