ರಾಜ್ಯೋತ್ಸವ ಕನ್ನಡಿಗರಿಗೆ ಸೀಮಿತವಾಗದಿರಲಿ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಹೊಸಕೋಟೆ, ಡಿ. ೭:ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಕನ್ನಡಿಗರಿಗೆ ಸೀಮಿತ ಎಂಬ ಭಾವನೆ ಬಿಟ್ಟು ಪ್ರತಿಯೊಬ್ಬ ಅನ್ಯ ಭಾಷಿಕರು ಆಚರಣೆ ಮಾಡುವಂತಾಗಬೇಕು ಎಂದು ನಿಸರ್ಗ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಹುಲ್ಲೂರಪ್ಪ ತಿಳಿಸಿದರು.
ನಗರದ ನಿಸರ್ಗ ಬಡಾವಣೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರಥಮವಾಗಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್‌ಗಷ್ಟೆ ಸೀಮಿತ ಮಾಡದೆ ವರ್ಷವಿಡಿ, ಅನ್ಯ ಭಾಷಿಕರನ್ನು ಜೊತೆಗೂಡಿಸಿಕೊಂಡು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಇದರಿಂದ ಕನ್ನಡ ಭಾಷೆಯ ಉಳಿವಿನ ಜೊತೆಗೆ ಭಾಷೆಯ ಮಹತ್ವವವನ್ನು ಎಲ್ಲಡೆ ಪಸರಿಸಲು ಸಾಧ್ಯವಾಗುತ್ತದೆ. ವಿವಿಧ ರಾಜ್ಯಗಳ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಭಾಷೆ ಸುಲಿದ ಬಾಳೆಹಣ್ಣಿನಂತಿದೆ. ಇದನ್ನು ಅರಿತು ಪ್ರತಿಯೊಬ್ಬರು ಕನ್ನಡ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬೇಕು. ಆದರೆ ಆಧುನಿಕ ಜೀವನ ಪದ್ದತಿಗೆ ಹೊಂದಿಕೊಂಡಿರುವ ಮನುಷ್ಯ ಆಂಗ್ಲಭಾಷೆಯ ಕಲಿಕೆಯ ಕಡೆ ಹೆಚ್ಚಿನ ಒತ್ತು ನೀಡುತ್ತಿದ್ದು ಕನ್ನಡ ಭಾಷೆಯನ್ನು ಮೂಲೆಗುಂಪು ಮಾಡುತ್ತಿದ್ದಾನೆ. ಎಂದರು.
ನಗರಸಭೆ ಅಧ್ಯಕ್ಷೆ ಶೋಭಾ ಜುಂಜಪ್ಪ ಮಾತನಾಡಿ ಕನ್ನಡ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬರು ಗೌರವವಿಟ್ಟು ರಕ್ಷಣೆಗೆ ಮುಂದಾಗಲು ಕಂಕಣಬದ್ದರಾಗಬೇಕಿದೆ. ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಕ್ಷೀಣಿಸುತ್ತಿರುವ ಪರಿಣಾಮ ಕನ್ನಡಿಗರೆಲ್ಲಾ ಜಾಗೃತರಾಗಿ ಕನ್ನಡದ ಉಳಿವಿಗಾಗಿ ಹೋರಾಟ ನಡೆಸುವ ಸಂಧರ್ಭ ಸೃಷ್ಠಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನಿಗಳಾಗಿ ಕನ್ನಡದಲ್ಲೆ ವ್ಯವಹರಿಸುವ ಮೂಲಕ ಅನ್ಯರಿಗು ಕನ್ನಡ ಕಲಿಸುವ ಕೆಲಸ ಮಾಡಬೇಕು ಎಂದರು. ಟೌನ್ ಬ್ಯಾಂಕ್ ಉಪಾಧ್ಯಕ್ಷ ಬಾಲಚಂದ್ರ, ನಗರಸಭೆ ಸದಸ್ಯೆ ಶಾಜಿಯಾ ಖಲಿಂ, ಮಾಜಿ ಪುರಸಭೆ ಅಧ್ಯಕ್ಷ ಖಯೂಂ ಪಾಷ, ಕನ್ನಡ ಸಂಘ ತಾಲೂಕು ಅಧ್ಯಕ್ಷ ಶಿವಣ್ಣ ಇದ್ದರು.