ರಾಜ್ಯೋತ್ಸವ ಆಚರಣೆ ನಿತ್ಯನೂತನವಾಗಲಿ

 ದಾವಣಗೆರೆ,ಡಿ.೨೭: ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದಿರಲಿ ಎಂದು ಪಾಲಿಕೆ ಮಹಾಪೌರ ಬಿ.ಜಿ.ಅಜಯಕುಮಾರ್ ತಿಳಿಸಿದರು.ನಗರದ ರೋಟರಿ ಬಾಲಭವನದಲ್ಲಿಂದು ವಿಶ್ವ ವೀರಶೈವ ಲಿಂಗಾಯಿತ ಏಕೀಕರಣ ಪರಿಷತ್, ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಹೊಸ ವರ್ಷ ಹೊಸ ಹರುಷ, ಸಾಧಕರಿಗೆ, ಕೊರೊನಾ ವಾರಿಯರ್ಸ್ ಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಮನ ಮಂಥನ ಕೃತಿ ಬಿಡುಗಡೆ, ಶರಣ ದಂಪತಿ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ, ವರ್ಷದ ೩೬೫ ದಿನಗಳಲ್ಲೂ ಆಚರಣೆಯಾಗಲಿ ಎಂದು ಹೇಳಿದರು.ಇಂದು ಇಲ್ಲಿ ನೀಡುತ್ತಿರುವ ಸನ್ಮಾನ, ಪುರಸ್ಕಾರವು ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡಲಿದ್ದು, ನೀವು ಮತ್ತಷ್ಟು ಸಾಧನೆ ಮಾಡಿ ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ ಅಧ್ಯಕ್ಷ, ವಕೀಲ ಬಳ್ಳಾರಿ ರೇವಣ್ಣ ವಹಿಸಿದ್ದರು. ವೇದಿಕೆಯಲ್ಲಿ ಪತ್ರಕರ್ತ ಶ್ರೀಧರ್ ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಹೆಚ್.ಜಿ.ಉಮೇಶ್, ಪರಿಷತ್ ಕಾರ್ಯಾಧ್ಯಕ್ಷ ಇಂದುಧರ ನಿಷಾನಿಮಠ, ದಾಕ್ಷಾಯಣಮ್ಮ ಅಂದಪ್ಪ, ನ್ಯಾಮತಿ ಶಿವಕುಮಾರ್, ಶಿವಕುಮಾರ್ ಶೆಟ್ಟರ್, ಲಲಿತಾ ಸುತಂ ಮತ್ತಿತರರು ಹಾಜರಿದ್ದರು.