ರಾಜ್ಯಾಧ್ಯಕ್ಷ ಷಡಕ್ಷರಿ ವಿರುದ್ಧ ಆರೋಪ ಸತ್ಯಕ್ಕೆ ದೂರ  – ಪಿ ಶಿವರಾಜ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 21 : –  ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಕ್ಷರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಪಿತೂರಿ ನಡೆಸಿ ಮಾಡಲಾಗಿರುವ ಅಪಪ್ರಚಾರ ಸತ್ಯಕ್ಕೆ ದೂರವಾಗಿದೆ ಅಲ್ಲದೆ ಈ ರೀತಿಯ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ಸರ್ಕಾರಿ ನೌಕರರ ಕೂಡ್ಲಿಗಿ ತಾಲೂಕಿನ ಅಧ್ಯಕ್ಷ  ಪಾಲ್ತೂರ್ ಶಿವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ  ಸಮಸ್ತ ತಾಲೂಕು ನೌಕರರ ಪರವಾಗಿ ಮಾತನಾಡುತ್ತ ರಾಜ್ಯ ಸರ್ಕಾರಿ ನೌಕರರ ಅಭ್ಯುಧಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸಂಘಟನೆಯ ರಾಜ್ಯಾಧ್ಯಕ್ಷರ ಜನಪ್ರೀಯತೆಯನ್ನು ಸಹಿಸಲಾರದೆ, ಸತ್ಯಕ್ಕೆ ದೂರವಾದ ಆರೋಪವನ್ನು ಜಾಲತಾಣಗಳಲ್ಲಿ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಅಧಿಕಾರಿಗಳು ಅಪಪ್ರಚಾರ ಮಾಡುತ್ತಿರುವುದು ಶುದ್ಧ ಸುಳ್ಳು ಎಂದಿದ್ದಾರೆ. ಅಲ್ಲದೆ   ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಉಂಟು ಮಾಡಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಮಾಡಿರುವುದು ಅಧ್ಯಕ್ಷರ ತೇಜೋವಧೆ ಮಾಡುವ ದುರುದ್ಧೇಶದಿಂದ ಕೂಡಿದೆ ಎಂದರು.  ಆದ್ಧರಿಂದ ಆಧಾರ ರಹಿತ ಆರೋಪಗಳನ್ನು ಮಾಡಿದ ಶಾಂತಾರಾಮ, ಅಧೀನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಸಕ್ಕರೆ), ಸರ್ಕಾರ ಸಚಿವಾಲಯ, ಬೆಂಗಳೂರು, ಗುರುಸ್ವಾಮಿ, ಶಾಖಾಧಿಕಾರಿ, ಸರ್ಕಾರ ಸಚಿವಾಲಯ, ಬೆಂಗಳೂರು, ಮೆಹಬೂಬ್ ಬಾಷ ಎಂ. ಜಾನುವಾರು ಅಭಿವೃದ್ಧಿ ಅಧಿಕಾರಿ, ಪಶು ಆಸ್ಪತ್ರೆ, ರಾಯಚೂರು, ಶಿವರುದ್ರಯ್ಯ ವಿ.ವಿ. ಸೂಪರ್‌ವೈಜರ್, ಭೂಮಾಪನ ಇಲಾಖೆ, ಬೆಂಗಳೂರು, ನಿಂಗೇಗೌಡ್ರು, ಉಪನ್ಯಾಸಕರು, ಸ.ಪ.ಪೂ.ಕಾಲೇಜು, ಅವ್ವೇರಹಳ್ಳಿ, ರಾಮನಗರ ಇವುರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಶಿಫಾರಸ್ಸುನೊಂದಿಗೆ ಅಗ್ರಹಿಸಿದರು.
ರಾಜ್ಯ ಪರಿಷತ್ತು ಸದಸ್ಯರಾದ ಸಿರಿಬಿ ಅಂಜಿನಪ್ಪ, ವೀರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ. ಸಿದ್ಧಾರಾಧ್ಯ, ಕೆ.ಎಸ್.ವೀರೇಶ್, ಆರ್.ಬಿ. ಬಸವರಾಜ್, ಚಂದ್ರಶೇಖರ್, ನವೀನ್, ಪ್ರಭು, ಮರುಳಸಿದ್ಧಪ್ಪ, ಶ್ರೀದೇವಿ, ವೈ. ಶಂಕ್ರಪ್ಪ, ಸವಿತಾ, ಶ್ವೇತಾ, ಸಂಗೀತಾ ಸೇರಿದಂತೆ ಅನೇಕ ನೌಕರರಿದ್ದು ಗುರುವಾರದಂದು ಕೂಡ್ಲಿಗಿ ತಹಸೀಲ್ದಾರ್ ಜಗದೀಶ ಅವರಿಗೆ ಮನವಿ ಸಲ್ಲಿಸಿ ಅಗ್ರಹಿಸಲಾಯಿತು.

One attachment • Scanned by Gmail