ರಾಜ್ಯಾದ್ಯಂತ ಹಣ್ಣು ಹಂಪಲು ಗಿಡ ನೆಡಲು ಧರ್ಮಸ್ಥಳದಲ್ಲಿ ಚಾಲನೆ

ಬೆಳ್ತಂಗಡಿ, ಜೂ.೬- ಅರಣ್ಯದಲ್ಲಿ ಹಣ್ಣುಹಂಪಲು ಕೊರತೆ ಕಾರಣ ಕಾಡುಪ್ರಾಣಿಗಳು ನಾಡಿಗೆ ಬರುತ್ತಿದ್ದು ಇದರ ರಕ್ಷಣೆಗೆ ಕಾಡಿನಲ್ಲಿ ಹಣ್ಣುಹಂಪಲು ಗಿಡ ನೀಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದ್ದು ಇದಕ್ಕಾಗಿ ರಾಜ್ಯಾದ್ಯಂತ ಹಣ್ಣುಪಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅವರು ಶನಿವಾರ ಕರ್ನಾಟಕ ಅರಣ್ಯ ಇಲಾಖೆ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳ ಸಹಯೋಗದಲ್ಲಿ ಧರ್ಮಸ್ಥಳದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕಾಡಿನಲ್ಲಿ ವನ್ಯಪ್ರಾಣಿಗಳಿಗಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಏ.೩೧ಕ್ಕೆ ಧರ್ಮಸ್ಥಳದಲ್ಲಿ ಈ ಬಗ್ಗೆ ಸಭೆ ಮಾಡಿದ್ದು ಅಲ್ಲಿ ಇಂದೇ ಚಾಲನೆ ನೀಡುವ ಬಗ್ಗೆ ನಿರ್ಣಯಿಸಲಾಗಿತ್ತು.ಕರೋನಾವಿದ್ದರು ಇದು ಗಿಡ ನೆಡುವ ಸಮಯವಾದ್ದರಿಂದ ತುರ್ತಾಗಿ ಚಾಲನೆ ನೀಡಲಾಗಿದೆ. ಈಗಾಗಲೆ ಸುಮಾರು ೧೨೫ ಎಕರೆ ಪ್ರದೇಶವನ್ನು ಅದಿಕಾರಿಗಳು ಗುರುತಿಸಿದ್ದು ಇಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಸಲಹಲಾಗುವುದು. ಈಗಾಗಲೇ ಆಮ್ಲಜನಕದ ಕೊರತೆ ಎದುರಾಗಿದ್ದು ಇದನ್ನು ವಿದೇಶದಿಂದ ತರಿಸುವ ಪರಿಸ್ಥಿತಿ ಬಂದಿದೆ. ಹಣ್ಣಿನ ಗಿಡ ಹಾಗು ಅರಣ್ಯ ಬೆಳೆಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದರು. ಡಾ ಹೆಗ್ಡೆಯವರು ಸಂಪೂರ್ಣ  ಸಹಕಾರ ನಿಡುತ್ತಿದ್ದು ಜೊತೆಗೆ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಅದಿಕಾರಿಗಳು, ಸದಸ್ಯರು ಸಹಕರಿಸುತ್ತಿದ್ದಾರೆ.ಇದು ರಾಜ್ಯಾದ್ಯಂತ ನಡೆಯಲಿದ್ದು ಧರ್ಮಸ್ಥಳದಲ್ಲಿ ಪ್ರಾಯೋಗಿಕವಾಗಿ ಪ್ರಾರಂಬಿಸಲಾಗಿದೆ ಎಂದರು.

ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾರಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿ ಮಾತನಾಡಿ ಈ ಕಾರ್ಯಕ್ರಮವನ್ನು ಬೇಡಿಕೆ ಇಟ್ಟ ಕೆಲವೇ ದಿನಗಳಲ್ಲಿ ಸಚಿವರು ಚಾಲನೆ ನೀಡಲು ಅಸಕ್ತಿ ವಹಿಸಿದ್ದು ಅವರಿಗೆ ಅಬಿನಂದನೆಗಳು. ಧರ್ಮಸ್ಥಳದಲ್ಲಿ ಸಾವಿರಾರು ಭಕ್ತರು ಬರುವುದರಿಂದ ಇಲ್ಲೆ ಮಾದರಿ ಕಾರ್ಯಕ್ರಮ ಮಾಡಿರುವುದರಿಂದ ಇದನ್ನು ಭಕ್ತರು ನೋಡಿ ಅವರಲ್ಲಿಯೂ ಅಳವಡಿಸಲು ಸಹಕಾರಿಯಾಗಿದೆ. ಇದು ನಿರಂತರವಾಗಿ ನಡೆಯುವ ಕಾರ್ಯಕ್ರಮ. ಎಲ್ಲರು ಕೈಜೋಡಿಸಬೇಕು. ಧ.ಗ್ರಾ. ಯೋಜನೆಯು ಹಲವಾರು ವರ್ಷಗಳಿಂದ ಅರಣ್ಯ ಬೆಳೆಸುವ ಕಾರ್ಯಮಾಡುತ್ತಿದೆ.ಹಣ್ಣಿನ ಗಿಡ ಬೆಳೆಯಲು ನಮ್ಮ ಶೌರ್ಯ ತಂಡದ ಸದಸ್ಯರು ಮುಂದೆ ಬಂದಿದ್ದಾರೆ ಎಂದರು. ಕಾರ್ಯಕ್ರಮ ದಲ್ಲಿ ಶಾಸಕ ಹರೀಶ್ ಪೂಂಜಾ,ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹನಾಯಕ್, ಧರ್ಮಸ್ಥಳ ಗ್ರಾ. ಪಂ. ಅದ್ಯಕ್ಷೆ ಜಯ ಮೋನಪ್ಪ ಗೌಡ,ಧ ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್ ಹೆಚ್ ಮಂಜುನಾಥ್, ಜನಜಾಗ್ರತಿ ಯೋಜನೆಯ ನಿರ್ದೇಶಕ ವಿವೇಕ್ ವಿ ಪಾಯಸ್,ಯೋಜನಾದಿಕಾರಿ ಜಯಕರ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ವೀರು ಶೆಟ್ಟಿ, ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾದೀಕಾರಿ ಸಂಜಯ್ ಮೋಹನ್ ಬೆಂಗಳೂರು, ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಪ್ರಕಾಶ್ ನಟಾಲ್ಖರ್ ಮಂಗಳೂರು, ಉಪ ಅರಣ್ಯಸಂ ರಕ್ಷಣಾದಿಕಾರಿ ವಿ ಕರಿಕಾಳನ್ ಮಂಗಳೂರು, ಸಹಾಯಅರಣ್ಯ ಸಂರಕ್ಷಣಾದಿಕಾರಿ ಸುಬ್ರಹ್ಮಣ್ಯ ರಾವ್ ಅರಣ್ಯ ಸಂರಕ್ಷಣಾದಿಕಾರಿ ತ್ಯಾಗರಾಜ್  ಮುಂತಾದವರು ಉಪಸ್ಥಿದರಿದ್ದರು.ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಡಬ್ಬಲ್ ಡೆಕ್ಕರ್ ಬಸ್ ಗೆ ಸಚಿವರು ಚಾಲನೆ ನೀಡಿದರು.ಧ ಗ್ರಾ ಯೋಜನೆಯ ಸದಸ್ಯರಿಗೆ ಗಿಡಗಳನ್ನು ಹಸ್ತಾಂತರಿಸಲಾಯಿತು.