ರಾಜ್ಯಾದ್ಯಂತ ಮಾ. 8ರಂದು ಕೊಲೆಯಾದವನೇ ಕೊಲೆಗಾರ ಚಲನಚಿತ್ರ ಬಿಡುಗಡೆ

ಕಲಬುರಗಿ:ಜ.10: ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ನಿಟ್ಟಿನಲ್ಲಿ ನಿರ್ಮಿಸಲಾದ ಕೊಲೆಯಾದವನೇ ಕೊಲೆಗಾರ ಕನ್ನಡ ಚಲನಚಿತ್ರವು ಮಾರ್ಚ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ನಾಯಕ ನಟ ಸಿದ್ದು ಎನ್.ಆರ್., ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಸಹ ಜಿಲ್ಲೆಯವನಾಗಿದ್ದು, ಈಗಾಗಲೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಜೀವನ ಆಧಾರಿತ ಅಜಾತಶತೃ ಎಂಬ ಪುಸ್ತಕ ಬರೆದಿರುವೆ. ಈಗ ಕೊಲೆಯಾದವನೇ ಕೊಲೆಗಾರ ಎಂಬ ಹೊಸ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವೆ ಎಂದರು.
ಚಿತ್ರಕ್ಕೆ ಮಲ್ಲಿಕಾರ್ಜುನ್ ಹಿರೇತನದ್ ಅವರು ನಿರ್ಮಾಪಕರು. ಜೊತೆಗೆ ನಿರ್ದೇಶಕರಾಗಿಯೂ ಮತ್ತು ನಟರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ಚಂದ್ರಿಕಾ ಅವರು ನಾಯಕ ನಟಿಯಾಗಿದ್ದಾರೆ. ಚಲನಚಿತ್ರದ ಚಿತ್ರೀಕರಣವು ಮೈಸೂರು, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಮಾಡಲಾಗಿದೆ. ಚಿತ್ರ ನಿರ್ಮಾಣ ಪೂರ್ಣಗೊಂಡಿದ್ದು, ಯುಎ ಸೆನ್ಸಾರ್ ಆಗಿದೆ ಎಂದು ಅವರು ತಿಳಿಸಿದರು.