ರಾಜ್ಯಾದ್ಯಂತ ಮಸೀದಿಗಳಲ್ಲಿ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ

ನವೆಂಬರ್ 5- ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೋಲೀಸ್ ಮಹಾನಿರ್ಏಶಕ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕಳೆದ ತಿಂಗಳು ವಕೀಲ ಹರ್ಷ ಮಾತಾಲಿಕ್, ಮಸೀದಿಗಳಲ್ಲಿ ಇರುವ ಧ್ವನಿವರ್ಧಕಗಳಿಂದ ಅನ್ಯ ಧರ್ಮೀಯರಿಗೆ ತೊಂದರೆಯಾಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಮತ್ತು ವಯಸ್ದಾದವರಿಗೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ತೊಂದರೆ ಅನುಭವಿಸುವಂತಾಗಿದ್ದು, ಮಸೀದಿಗಳಲ್ಲಿ ಇರುವ ಧ್ವನಿವರ್ಧಕ ನಿಷೇಧ ಮಾಡುವಂತೆ ದೂರು ನೀಡಿದ್ದರು.
ಈ ದೂರಿಗೆ ಸ್ಪಂದಿಸಿರುವ ಪ್ರವೀಣ್ ಸೂದ್, ರಾಜ್ಯದ ಎಲ್ಲ ಎಸ್ಪಿಗಳಿಗೆ ನಗರದ ಪೊಲೀಸ್ ಆಯಕ್ತರಿಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಮಸೀದಿಗಳಲ್ಲಿ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶಿಸಿದ್ದಾರೆ.
ಯಾವುದೇ ಅನಧಿಕೃತ ಧ್ವನಿ ವರ್ಧಕಗಳನ್ನು ಬಳಕೆ ಮಾಡಿದರೆ ಅವರ ವಿರುದ್ಧ ಸೂಕ್ತ ಬಿಗಿಭದ್ರತೆ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.