ರಾಜ್ಯಸರ್ಕಾರ ಅಧೋಗತಿಗೆ: ಜೋಶಿ

ಹುಬ್ಬಳ್ಳಿ, ಫೆ 24: ರಾಜ್ಯ ಸರ್ಕಾರ ಒಂದು ಲಕ್ಷ 90 ಸಾವಿರ ಕೋಟಿ ಸಾಲ ಮಾಡಿದೆ. ಸರ್ಕಾರ ಇವತ್ತು ಅಧೋಗತಿಗೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೆಳಿದರು.
ನಗರದಲ್ಲಿಂದು ಲೋಕಸಭಾ ಚುನಾವಣೆ ನಿಮಿತ್ತ ಪಕ್ಷದ ಅಧಿಕೃತ ಕಾರ್ಯಾಲಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪಾಪದ ಕೆಲಸ ಸರ್ಕಾರ ಮಾಡಿದೆ. ದೇವಸ್ಥಾನದ ಹಣವನ್ನು ಸರ್ಕಾರ ನಿಂತು ಲೂಟಿ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ಹಿಂದೂಗಳ ಭಾವನೆಗೆ ಕಾಂಗ್ರೆಸ್ ದಕ್ಕೆ ತಂದಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯಾದ್ಯಂತ ಈ ವಿಷಯವಾಗಿ ಹೋರಾಟ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಮಾದರಿಯ ಹೋರಾಟ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಕಾರ್ಯಾಲಯಕ್ಕೆ ಹಾಜರಾಗದ ವಿಷಯವಾಗಿ ಮಾತನಾಡಿ, ಇಂದು ಜಗದೀಶ್ ಶೆಟ್ಟರ್ ಊರಲ್ಲಿ ಇಲ್ಲ, ಹಾಗಾಗಿ ಕಾರ್ಯಾಲಯ ಉದ್ಘಾಟನೆಗೆ ಬಂದಿಲ್ಲ, ಶೆಟ್ಟರ್ ಜತೆಗೆ ಇರೋ ಕಾರ್ಯಕರ್ತರನ್ನು ವಾಪಾಸ್ ತೆಗೆದುಕೊಳ್ಳಲು ತಿರ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ನಾವೆಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ. ಫೆ.26 ರ ಬಳಿಕ ಜಗದೀಶ್ ಶೆಟ್ಟರ್ ನಮ್ಮೊಂದಿಗೆ ಇರಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.