ರಾಜ್ಯಸಭೆ 12 ಸದಸ್ಯರ ಅಮಾನತ್ತು : ಮುಂದಿನ ಹೋರಾಟ ನಾಳೆ ನಿರ್ಧಾರ

ನವದೆಹಲಿ, ನ.29- ಸಂಸತ್ ಅಧಿವೇಶನ ಮೊದಲ ದಿನವಾದ ಇಂದು ರಾಜ್ಯಸಭಯಲ್ಲಿ ಗದ್ದಲ ಗಲಾಟೆ ನಡೆದು ವಿರೋದ ಪಕ್ಷಗಳ 12 ಸದಸ್ಯರನ್ನು ಸದನ ಪೂರ ಅಮಾನತ್ತು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ರೋಷ ‌ರೆಶೆ ಸಿದ್ದ ಪಡಿಸಲು ವಿರೋದ ಪಕ್ಷಗಳ ಸದನ ನಾಯಕರು ನಾಳ ಸಭೆ ಸೇರಲಿದ್ದು ಸದನಲ್ಲಿ ಹೋರಾಟ ಮಾಡ ಮುಂದಾಗಿದ್ದಾರೆ.

ಇಂದಿನಿಂದ ಆರಂಭವಾದ ಸಂಸತ್ ಅಧಿವೇಶನದ ಮೊದಲ ದಿನ ರಾಜ್ಯಸಭಯಲ್ಲಿ ವಿವಿಏ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ 12 ವಿವಿಧಪಕ್ಷಗಳ ಸದಸ್ಯರನ್ನು ಸದನ ನಡೆಯುವ ತನಕ ಅಮಾನತು ಮಾಡಲಾಗಿದೆ.

ಇದರಿಂದ ಸಭಾಪತಿ ಪೀಠದ ವಿರುದ್ದ ಗರಂ ಆಗಿರುವ ವಿರೋಧಪಕ್ಣಗಳ ನಾಯಕರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಹೋರಾಟ ಮತ್ತಷ್ಟು ತೀವ್ರ ಗೊಳಿಸಲು ಮುಂದಾಗಿದ್ದಾರೆ‌

ಖಂಡನೆ:

ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದ ಸದಸ್ಯರನ್ನು ಅಮಾನತ್ ಮಾಡಿರುವ ಸಭಾಪತಿಗಳ ಕ್ರಮವನ್ನು ವಿರೋಧ ಪಕ್ಷಗಳು ತೀವರವಾಗಿ ಖಂಡಿಸಿವೆ.

ಅಲ್ಲದೆ 12 ಸದಸ್ಯರ ಅಮಾನತ್ತು ಕೂಡಲೇವಾಪಸ್ ಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ

ಈ ವೇಳೆ ಮಾತನಾಡಿದ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸದಸ್ಯರ ಅಮಾನತು ಸರಿಯಲ್ಲ. ಹೋರಾಟ ಮಾಡುವ ಹಕ್ಕನ್ನು ಹತ್ತಿಕ್ಕಲಾಗುತ್ರಿದೆ. ನಾಳೆ ಎಲ್ಲಾ ವಿರೋದ ಪಕ್ಷಗಳು ಸಭೆ ಸೇರಿ ಹೋರಾಟದ ರೂಪರೇಶೆ ಸಿದ್ದಪಡಿಸಲಾಗುವುದು ಎಂದರು.