ರಾಜ್ಯಸಭಾ ಸ್ಥಾನ : ಶಂಕ್ರಪ್ಪ, ಸುಮಾಗಸ್ತಿ ಸೇರಿ ಮೂವರು ಹೆಸರು ಶಿಫಾರಸ್ಸು

 • ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನ ಮತ್ತೇ ಜಿಲ್ಲೆಗೆ ದೊರೆಯುವ ಸಾಧ್ಯತೆ?
  ರಾಯಚೂರು.ನ.16- ತೀವ್ರ ಕುತೂಹಲ ಕೆರಳಿಸಿದ ಅಶೋಕ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನ ಮತ್ತೇ ಜಿಲ್ಲೆಗೆ ದೊರೆಯುವ ಸಾಧ್ಯತೆಗಳು ತೀವ್ರವಾಗಿದ್ದು, ರಾಜ್ಯ ಬಿಜೆಪಿ ಕೋರ್ ಕಮಿಟಿ ಕೇಂದ್ರ ಬಿಜೆಪಿ ಪಕ್ಷಕ್ಕೆ ಶಿಫಾರಸ್ಸು ಮಾಡಿದ ಮೂವರು ಹೆಸರಲ್ಲಿ ಬಿಜೆಪಿ ಹಿರಿಯ ನಾಯಕ ಎನ್.ಶಂಕ್ರಪ್ಪ ಮತ್ತು ಅಶೋಕ ಗಸ್ತಿ ಅವರ ಪತ್ನಿ ಸುಮಾ ಗಸ್ತಿ ಅವರ ಹೆಸರು ಶಿಫಾರಸ್ಸುಗೊಳಿಸಲಾಗಿದೆ. ಇವರೊಂದಿಗೆ ಮತ್ತೊಂದು ಹೆಸರು ಶಿಫಾರಸ್ಸುಗೊಂಡಿದ್ದು, ಯಾರೆಂದು ಸ್ಪಷ್ಟಗೊಂಡಿಲ್ಲ.
  ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ಸೇವೆಯನ್ನು ಪರಿಗಣಿಸಿ, ಅಶೋಕ ಗಸ್ತಿ ಅವರಿಗೆ ಅವಕಾಶ ನೀಡಲಾಗಿತ್ತು. ಅಶೋಕ ಗಸ್ತಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕೊರೊನಾ ಮಹಾಮಾರಿಗೆ ಗುರಿಯಾದ ಅವರು, ಕೊನೆಯುಸಿರೆಳಿದ್ದರು. ಇವರ ನಿಧದಿಂದ ತೆರವಾದ ಈ ಸ್ಥಾನಕ್ಕೆ ಡಿಸೆಂಬರ್ 1 ರಂದು ಚುನಾವಣೆ ನ‌ಡೆಯಲಿದೆ. ಮುಂದಿನ ಎರಡು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುವ ಕಾರಣ ಇಂದು ಸಂಜೆ ಅಥವಾ ನಾಳೆ ಮುಂಜಾನೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ.
  ಈ ಸ್ಥಾನಕ್ಕೆ ಜಿಲ್ಲೆಯಿಂದ ಎನ್.ಶಂಕ್ರಪ್ಪ ಮತ್ತು ಅಶೋಕ ಗಸ್ತಿ ಅವರ ಪತ್ನಿ ಸುಮಾಗಸ್ತಿ ಅವರ ಹೆಸರು ಶಿಫಾರಸ್ಸುಗೊಂಡಿವೆ. ಈಗಾಗಲೇ ಕೋರ್ ಕಮಿಟಿಯಲ್ಲಿ ಈ ಇಬ್ಬರು ಹೆಸರುಗಳ ಬಗ್ಗೆ ಚರ್ಚೆ ನಡೆಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಅಶೋಕ ಗಸ್ತಿ ಅವರ ಪಕ್ಷ ಸೇವೆಯನ್ನು ಪರಿಗಣಿಸಿ, ಅವರ ಪತ್ನಿ ಅವರಿಗೆ ರಾಜ್ಯಸಭಾ ಸ್ಥಾನ ನೀಡುವಂತೆ ಕೆಲ ಮುಖಂಡರು ಸೂಚಿಸಿದ್ದಾರೆ. ಇನ್ನೂ ಕೆಲವರು ಶಂಕ್ರಪ್ಪ ಅವರ ಹೆಸರು ಪರಿಗಣಿಸಬಹುದೆಂದು ಹೇಳಿದ್ದಾರೆ. ಮೂರನೇ ಹೆಸರು ಸಹ ಈ ಇಬ್ಬರೊಂದಿಗೆ ಶಿಫಾರಸ್ಸುಗೊಂಡಿದ್ದರಿಂದ ಯಾರಿಗೆ ಹೈಕಮಾಂಡ್ ಸ್ಪರ್ಧಿಸಲು ಟಿಕೆಟ್ ನೀಡಲಿದೆ ಎನ್ನುವ ಕುತೂಹಲ ತೀವ್ರಗೊಂಡಿದೆ.
  ಜಿಲ್ಲೆಗೆ ರಾಜ್ಯಸಭಾ ಸ್ಥಾನ ದೊರೆಯುವುದು ಬಹುತೇಕ ಖಚಿತ ಎನ್ನುವ ಸೂಚನೆಗಳು ಲಭ್ಯವಾಗಿವೆ.
  ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದಾಗ ಜಿಲ್ಲೆಯಲ್ಲಿ ಎಲ್ಲಾರಿಂದ ಮೆಚ್ಚುಗೆ ವ್ಯಕ್ತಗೊಂಡಿತು. ಪಕ್ಷದ ಸೇವೆ ಸಲ್ಲಿಸಿದವರಿಗೆ ಈ ರೀತಿ ಗುರುತಿಸುವುದು ಅನ್ಯ ಪಕ್ಷದವರಿಂದಲೂ ಪ್ರಶಂಸೆ ವ್ಯಕ್ತಗೊಂಡಿತು. ಆದರೆ, ದುರಂತವೆಂದರೇ, ಅಶೋಕ ಗಸ್ತಿ ಅವರು ಅಕಾಲಿಕ ನಿಧನ ಭಾರೀ ಶೋಕಕ್ಕೆ ಗುರಿ ಮಾಡಿತ್ತು. ಈಗ ಗಸ್ತಿಯಂತಹ ನಿಷ್ಠಾವಂತ ಪಕ್ಷದ ನಾಯಕರನ್ನು ಕಳೆದುಕೊಂಡ ಜಿಲ್ಲೆಯ ಪ್ರಾತಿನಿಧ್ಯವನ್ನು ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರು ಅಶೋಕ ಗಸ್ತಿ ಅವರ ನಿಧನಕ್ಕೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವ ರಾಜಕೀಯ ಸತ್ಕಾರ್ಯ ಕೈಗೊಳ್ಳುವರೇ?. ಅನುಕಂಪದ ಆಧಾರದ ಮೇಲೆ ಗಸ್ತಿ ಅವರ ಪತ್ನಿಯನ್ನು ಹೈಕಮಾಂಡ್ ಪರಿಗಣಿಸುವುದೇ ಅಥವಾ ಪಕ್ಷದ ಹಿರಿತನದ ಆಧಾರದಲ್ಲಿ ಶಂಕ್ರಪ್ಪ ಅವರನ್ನು ಪರಿಗಣಿಸುವುದೇ ಎನ್ನುವುದು ಕುತೂಹಲ ಮೂಡಿಸಿದೆ. ರಾಜಕೀಯ ವಲಯದಲ್ಲಿ ಈ ಬಗ್ಗೆ ಭಾರೀ ಜಿಜ್ಞಾಸೆ ಮೂಡಿಸಿದೆ.

ಗಸ್ತಿ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನ ಮತ್ತೇ ಜಿಲ್ಲೆಗೆ ದೊರೆಯುವ ಸಾಧ್ಯತೆ?