ರಾಜ್ಯಸಭಾ ಮಾಜಿ ಸದಸ್ಯ ತರುಣ್‍ಗೆ ಸನ್ಮಾನ

ಗಂಗಾವತಿ ಡಿ.29: ಹನುಮ ಜಯಂತಿ ಪ್ರಯುಕ್ತ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬಿಜೆಪಿ ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಮಾಜಿ ಸದಸ್ಯ ತರುಣ್ ವಿಜಯ್ ಭೇಟಿ ನೀಡಿ ಆಚಿಜನೇಯ ಸ್ವಾಮಿ ದರ್ಶನ ಪಡೆದರು.
ಶಾಸಕ ಪರಣ್ಣ ಮುನವಳ್ಳಿ ಮತ್ತು ದೇವಸ್ಥಾನ ಕಮೀಟಿ ತರುಣ್ ವಿಜಯ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿಲಾಯಿತು.
ಮುಖಂಡರಾದ ಸಂತೋಷ ಕೆಲೋಜಿ, ಚಂದ್ರು ಆನೆಗೊಂದಿ, ಪದ್ಮನಾಭರಾಜ, ಮಂಜುನಾಥ ಜಂತಕಲ್, ವೆಂಕಟೇಶ ಉಪಸ್ಥಿತರಿದ್ದರು.