ರಾಜ್ಯವೇ ಬಳ್ಳಾರಿಯತ್ತ ನೋಡುವಂತೆ ಅಭಿವೃದ್ಧಿ ಮಾಡುವುದು ನನ್ನ ಗುರಿ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ನಗರದ 21 ನೇ ವಾರ್ಡಿನ ಕೆರೆ ಮೇಲಿನ ಮತ್ತು ಬದರಿನಾರಾಯಣ ದೇವಸ್ಥಾನದ ಮುಂಭಾಗದ ಮನೆ ಮನೆಗೆ ತೆರಳಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಇಂದು  ಮತ  ಯಾಚನೆ ಮಾಡಿದರು.
ಸ್ಥಳೀಯರ ಅಭಿಮಾನದ ಜೊತೆಗೆ, ಪತಿ ಜನಾರ್ದನ ರೆಡ್ಡಿಯವರು ಸಚಿವರಾಗಿದ್ದಾಗ ಮಾಡಲಾಗಿದ್ದ ನಗರದ  ಅಭಿವೃದ್ಧಿಯ ಬಗ್ಗೆ ಮಾತನಾಡಿ, ನನ್ನ ಆನಂದಕ್ಕೆ ಪಾರಾವೇ ಇಲ್ಲ. ನನಗೆ ಮತ ನೀಡಿ ಮತ್ತೊಮ್ಮೆ ರಾಜ್ಯವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ನಗರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು. 
ಈ ಸಂದರ್ಭದಲ್ಲಿ ಕೃಷ್ಣ, ರಮೇಶ್, ದುರುಗಣ್ಣ, ಮಾರೆಣ್ಣ, ನಾಗರಾಜ್, ಮಂಜು, ಚಿರಂಜೀವಿ ಮುಂತಾದವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು
ಈ ಸಂದರ್ಭದಲ್ಲಿ  ಪಕ್ಷದ ಮುಖಂಡ ಪ್ರಕಾಶ್ ರೆಡ್ಡಿ, ರಾಘವೇಂದ್ರ(ಟೂಬ್ ರಘು) ಬೆಲ್ಲಂ ವಾಸುರೆಡ್ಡಿ. ಆನಂದ್, ವಾಸು, ರಾಮು, ಮಹಿಳಾ ಘಟಕದ ನಗರ ಅಧ್ಯಕ್ಷೆ  ನಾಗವೇಣಿ, ಹರ್ಷಿಯಾ,ಅಂಜಲಿ, ಬಾನು ,  ಅಕ್ಕಮಹಾದೇವಿ,  ರೂಪ, ರಾಜೇಶ್ವರಿ, ಗೀತಾರಾಮ್ ಇಸಾಕ್  ಮೊದಲಾದವರು  ಪ್ರಚಾರದಲ್ಲಿ ಭಾಗವಹಿಸಿದ್ದರು.