ರಾಜ್ಯಮಟ್ಟದ ಸ್ಪರ್ಧೆಗಳು

ಕೋಲಾರ,ಡಿ,೨೯-ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಶ್ರಯದಲ್ಲಿ ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾರ ದಿನಾಚರಣೆ-೨೦೨೪ರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು (ಪ್ರಬಂಧ ಸ್ಪರ್ಧೆ ಕನ್ನಡ ಮತ್ತು ಆಂಗ್ಲ ಭಾಷೆ, ಮತ್ತು ಬಿತ್ತಿ ಚಿತ್ರ ರಚನೆ) ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಅನುಶ್ರೀ, ಎಸ್,ಜಿ. ಸ್ನೇಹ,ಸಿ. ಮೌನೇಶ್. ತೇಜಸ್ವಿನಿ, ಕೆ.ಎಸ್. ಮೇಘ ಶಿವಪ್ಪ ಹೂಗಾರ್. ನಿಶಾ ಎಂ. ಕುಸುಮ, ಎಂ,ಎಸ್. ಹರ್ಷಿತ. ಎಂ, ಅಶ್ವಿನ್. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎನ್. ರವಿಚಂದ್ರ, ಸಹಾಯಕ ಯೋಜನಾಧಿಕಾರಿ ಎಸ್.ಹೆಚ್. ಗೋವಿಂದಗೌಡ, ಐಇಸಿ ಸಮಾಲೋಚಕ ಕೆ.ವಿ.ಜಗದೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೋ: ಶ್ರೀನಿವಾಸ ಗೌಡ, ಜಿಲ್ಲಾ ಸಮಾಜಕ ಡಾ. ಆರ್. ಶಂಕರಪ್ಪ, ಡಿ.ಡಿ.ಪಿ.ಐ ಕಛೇರಿ ವತಿಯಿಂದ ಟಿ.ವಿ ಗಾಯಿತ್ರಿ, ಶಶಿವದನ ಭಾಗವಹಿಸಿದ್ದರು.