ರಾಜ್ಯಮಟ್ಟದ ವಿಚಾರ ಸಂಕಿರಣ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಅ25: ಕಿತ್ತೂರು ಉತ್ಸವದ ಎರಡನೇ ದಿನದ ಕಿತ್ತೂರು ಸಂಸ್ಥಾನ ಕುರಿತು ವಿಚಾರ ಸಂಕಿರಣ ಜರುಗಿತು.
ಧಾರವಾಡದ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಅಧ್ಯಕ್ಷತೆಯಲ್ಲಿ ಡಾ. ಕೆ.ಆರ್ ಮೆಳವಂಕಿ ಅವರು ಕಿತ್ತೂರು ಸಂಸ್ಥಾನ ಕಾಲದ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಹೆಜ್ಜೆಗಳು, ಗಂಗಾಧರ ದೊಡವಾಡ ಅವರು ಕಿತ್ತೂರು ಅರಸರ ಕಾಲದಲ್ಲಿ ಧಾರ್ಮಿಕ ಪ್ರಜ್ಞೆ, ರುದ್ರೇಶ ಮೇಟಿ ಅವರು ಕಿತ್ತೂರು ಸಂಸ್ಥಾನದೊಂದಿಗೆ ಸಮಕಾಲಿನ ದೇಶಗತಿ ಮನೆತನದ ಸಂಬಂಧ, ಡಾ ರಾಜಶೇಖರ ಬಿರಾದಾರ ಅವರು ಇತಿಹಾಸ ಸಂಶೋಧಕ ದೊಡ್ಡಭಾವೆಪ್ಪ ಮೂಗಿ ಇವರ ಕುರಿತು ಮತ್ತು ಮಹಾಂತೇಶ ಕುಂಬಾರ ಅವರು ಕಿತ್ತೂರು ಚೆನ್ನಮ್ಮನ ದೇಶಪ್ರೇಮ. ಗಜಾನಂದ ಸೋಗಲನ್ನವರ ಜಿತ್ತೂರ ಸಂಸ್ಥಾನದ ಕುರಿತು ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಾಹಿತಿ ಡಾ.ಶೇಖರ ಹಲಸಗಿ ಆಶಯ ನುಡಿ ನುಡಿದರು. ಗೌರಿ ಮಟ್ಟಿ ನಿರೂಪಿಸಿದರು. ಬಿ.ಸಿ.ಬಿದರಿ ಸ್ವಾಗತಿಸಿದರು.