ರಾಜ್ಯಮಟ್ಟದ ರಾಣಿ ರುದ್ರಮ್ಮ ದೇವಿ ಪ್ರಶಸ್ತಿ ಪ್ರಧಾನ

ರಾಯಚೂರು,ಫೆ.೨೭- ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಾನಪದ ಪರಿಷತ್ ವತಿಯಿಂದ ನಿನ್ನೆ ನಡೆದ ಪ್ರಥಮ ಜಾನಪದ ಮಹಿಳಾ ಸಮ್ಮೇಳನದಲ್ಲಿ ಜಾನಪದದ ವಿವಿಧ ಕಲೆಗಳಗಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ರಾಣಿ ರುದ್ರಮ್ಮ ದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿಂಧನೂರಿನ ರಮಾದೇವಿ ಶಂಭೋಜಿ ಹಿರಿಯ ಸಾಹಿತಿಗಳು ಹಾಗೂ ಹಸಮಕಲ್‌ನ
ಶಾಂತಮ್ಮ ಹಸಮಕಲ್ ಬುರ್ರಕಥೆ ಕಲೆಯಲ್ಲಿ ಗಣನೀಯ ಸೇವೆ ಮಾಡುತ್ತಿರುವ ಇವರಿಗೆ ಸೇರಿದಂತೆ ೮ ಜನ ಸಾಧಕರಿಗೆ ರಾಯಚೂರು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ರಾಜ್ಯಮಟ್ಟದ ರಾಣಿ ರುದ್ರಮ್ಮ ದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎಸ್ ಬಾಲಾಜಿ, ಜಿಲ್ಲಾಧ್ಯಕ್ಷರಾದ ಶರಣಪ್ಪ ಎಸ್. ಗೋನಾಳ್, ಹಿರಿಯ ಚಿಂತಕರಾದ ಮೀನಾಕ್ಷಿ ಖಂಡಿಮಠ, ಜೆಡಿಎಸ್ ಮುಖಂಡ ರಾಮನಗೌಡ ಏಗನೂರು, ಗಾಯಕಿ ರೇಖಾ ಸಿಂಧನೂರು, ವಿಜಯಲಕ್ಷ್ಮಿ ಮಾನ್ವಿ ಇನ್ನಿತರರು ಉಪಸ್ಥಿತರಿದ್ದರು.